ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣ ನಾಲ್ವರು ಅಪರಾಧಿಗಳು ನೇಣು ಕುಣಿಕೆಗೇರುವುದು ಖಾಯಂ ಆಗಿದೆ. ಹಿಂದೆ ನೀಡಿದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೆಹಲಿ ಪಟಿಯಾಲ ಕೋರ್ಟ್ ಹೇಳಿದೆ.
ಮಾರ್ಚ್ 20 ಬೆಳಗ್ಗೆ 5:30 ನಿಗದಿಯಾಗಿದ್ದ ಗಲ್ಲು ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಧರ್ಮೇಂದ್ರ ರಾಣಾ ನೇತೃತ್ವದ ಪೀಠವು ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಲ್ಲ ಬಗೆಯ ಕಾನೂನು ಹೋರಾಟ ಅಂತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
Nirbhaya's lawyer Seema Kushwaha: I am sure that all four convicts will be hanged at 5.30am tomorrow. https://t.co/beVuCxevnR pic.twitter.com/DexcbVNetl
— ANI (@ANI) March 19, 2020
ಇದಕ್ಕೂ ಮುನ್ನ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ದೋಷಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಇದಲ್ಲದೇ ದೋಷಿ ಪವನ್ ಗುಪ್ತಾ, ಅಕ್ಷಯ್ ಠಾಕೂರ್ ಎರಡನೇ ಬಾರಿ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ವಜಾ ಮಾಡಿದ್ದರು.
ನಾಲ್ವರು ದೋಷಿಗಳು ಕಾನೂನು ಹೋರಾಟ ಬಹುತೇಕ ಅಂತ್ಯವಾಗಿದ್ದು ಹಿಂದೆ ನಿಗದಿಯಂತೆ ನಾಳೆ ಬೆಳಗ್ಗೆ 5:30 ಗಲ್ಲು ಶಿಕ್ಷೆಯಾಗಲಿದೆ. ಗಲ್ಲು ಶಿಕ್ಷೆ ಹಿನ್ನೆಲೆಯಲ್ಲಿ ತಿಹಾರ್ ಜೈಲು ಸಿಬ್ಬಂದಿ ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ. ಉತ್ತರ ಪ್ರದೇಶದಿಂದ ಆಗಮಿಸಿರುವ ಗಲ್ಲಿಗೇರಿಸುವ ಪವನ್ ಜೆಲ್ಲದಾ ತಿಹಾರ್ ಜೈಲಿಗೆ ಆಗಮಿಸಿದ್ದು, ನಿನ್ನೆ ಪ್ರಾಯೋಗಿಕ ಪ್ರಯೋಗ ನಡೆಸಿದ್ದಾರೆ.
AP Singh, 2012 Delhi gangrape case convicts lawyer before Patiala House Court: Send them to Indo-Pak border, send them to Doklam, but don't hang them. They are ready to serve the country. I can file an affidavit in this regard. (file pic) pic.twitter.com/6FMSxcpn9e
— ANI (@ANI) March 19, 2020