ವಾಷಿಂಗ್ಟನ್: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಬಗ್ಗೆ ವಿಚಿತ್ರವಾಗಿ ತನ್ನ ಅಭಿಪ್ರಾಯ ಹಂಚಿಕೊಂಡು ಮಾಡೆಲ್ ಓರ್ವಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ‘ಕೊರೊನಾ ವೈರಸ್ ಚಾಲೆಂಜ್’ ಎಂದು ಮಾಡೆಲ್ ವಿಮಾನದ ಟಾಯ್ಲೆಟ್ ನೆಕ್ಕಿದ ಟಿಕ್‍ಟಾಕ್ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಅಮೆರಿಕ ಮೂಲದ ಮಾಡೆಲ್ ಅವಾ ಲೌಸಿ(21) ಟಿಕ್ ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಳು. ‘ಇಟ್ಸ್ ಕೊರೊನಾ ಟೈಮ್’ ಎಂಬ ಹಾಡಿಗೆ ಲೌಸಿ ಟಾಯ್ಲೆಟ್ ನೆಕ್ಕುತ್ತಾ ಟಿಕ್‍ಟಾಕ್ ಮಾಡಿದ್ದಾಳೆ. ದಯವಿಟ್ಟು ಇದನ್ನು ತಿಳಿದುಕೊಳ್ಳಿ. ವಿಮಾನದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹೀಗೆ ಮಾಡಿ ಎಂದು ವಿಡಿಯೋಗೆ ಕ್ಯಾಪ್ಷನ್ ಹಾಕಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಳು. ಇದನ್ನು ನೋಡಿದ ನೆಟ್ಟಿಗರು ಆಕೆಯ ವಿರುದ್ಧ ಗರಂ ಆಗಿದ್ದು, ವಿಡಿಯೋ ಸಖತ್ ವೈರಲ್ ಆಗಿತ್ತು. ಅತ್ತ ನೆಟ್ಟಿಗರು ಮಾಡೆಲ್ ವಿರುದ್ಧ ಕೆಂಡ ಕಾರುತ್ತಿದ್ದಂತೆ ಇತ್ತ ಆಕೆ ವಿಡಿಯೋವನ್ನೇ ಡಿಲೀಟ್ ಮಾಡಿದ್ದಾಳೆ.
https://twitter.com/realavalouiise/status/1238915362470625292
ಇನ್‍ಸ್ಟಾಗ್ರಾಮ್‍ನಲ್ಲಿ ಸುಮಾರು 1 ಲಕ್ಷದ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಲೌಸಿ ಈ ಹಿಂದೆ ಹಲವು ಟೆಲಿವಿಷನ್ ಟಾಕ್ ಶೋಗಳಲ್ಲಿ ಕಾಣಿಸಿಕೊಂಡಿದ್ದಳು. ಕೊರೊನಾ ವೈರಸ್ ಚಾಲೆಂಜ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತನ್ನ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಲೌಸಿ ಹೀಗೆ ಮಾಡಿದ್ದಾಳೆ ಎಂಬ ಆರೋಪ ಮಾಡುತ್ತಿದ್ದಂತೆ ವಿಡಿಯೋವನ್ನು ಆಕೆ ಡಿಲೀಟ್ ಮಾಡಿ ಸುಮ್ಮನಾಗಿದ್ದಾಳೆ.
Yeah she is in for Corona Challenge????????
This is on a plane too and i think she did better than her #COVIDー19 pic.twitter.com/mnX8l7DWP5
— Dr. Vedika (@vishkanyaaaa) March 16, 2020
ಲೌಸಿ ಆರಂಭಿಸಿದ ಕೊರೊನಾ ವೈರಸ್ ಚಾಲೆಂಜ್ ಅನ್ನು ಅನೇಕರು ಸ್ವಿಕರಿಸಿದ್ದು, ಲೌಸಿಯಂತೆ ವಿಮಾನಗಳಲ್ಲಿ ಟಾಯ್ಲೆಟ್ ನೆಕ್ಕುತ್ತಿರುವ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕೊರೊನಾ ವೈರಸ್ ಚಾಲೆಂಜ್ ಮಾಡುತ್ತಿರುವವರನ್ನು ಟ್ರೋಲ್ ಮಾಡುತ್ತಿದ್ದಾರೆ.
— meme expert???? (@twomad) March 16, 2020