ಉಡುಪಿ: ರಾಜ್ಯಾದ್ಯಂತ ಕೊರೊನಾ ಭೀತಿ ಇದೆ. ಕರಾವಳಿ ಜಿಲ್ಲೆಯಲ್ಲಿ 10 ಪ್ರಕರಣ ನೆಗೆಟಿವ್ ಬಂದಿದ್ದು, 90 ಜನ ಎನ್‌ಆರ್‌ಐಗಳನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಎಲ್ಲೆಡೆ ಕೊರೊನಾ ಭೀತಿ ಇರುವುದರಿಂದ ಉಡುಪಿ ಜಿಲ್ಲೆಯಲ್ಲಿ 90 ಮಂದಿಗೆ ಗೃಹ ಬಂಧನ ಹಾಕಲಾಗಿದೆ. ಕಳೆದ ಫೆಬ್ರವರಿ 29 ರಿಂದ ಈಚೆಗೆ ವಿದೇಶದಿಂದ ಉಡುಪಿಗೆ 90 ಜನ ಎನ್‌ಆರ್‌ಐಗಳು ಬಂದಿದ್ದಾರೆ. ಅವರೆಲ್ಲರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ.
ಫೆಬ್ರವರಿ 29 ರಿಂದ ಕೊರೊನಾ ಬಗ್ಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಪೂರ್ಣ ನಿಗಾ ವಹಿಸಲಾಗಿದೆ. ಕುವೈಟ್, ಜರ್ಮನಿ, ಇಸ್ರೇಲ್. ಇಟಲಿಯಿಂದ ಬಂದವರೇ ನಮ್ಮಲ್ಲಿ ಜಾಸ್ತಿ ಜನ ಇದ್ದಾರೆ. ಅವರವರ ಮನೆಯಲ್ಲೇ ಎನ್‍ಆರ್‍ಐ ಗಳ ಮೇಲೆ ನಿಗಾ ಇಟ್ಟಿದ್ದು, ಪ್ರತಿದಿನ ಕರೆ ಮಾಡಿ ವಿಚಾರಣೆ ಮಾಡುತ್ತೇವೆ ಎಂದು ಡಿಎಚ್‍ಒ ಮಾಹಿತಿ ನೀಡಿದ್ದಾರೆ.
ವಿದೇಶದಿಂದ ಉಡುಪಿಗೆ ಬಂದವರನ್ನು 14 ದಿನ ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ಳುತ್ತಿದ್ದೇವೆ. ಅವರ ಕುಟುಂಬಸ್ಥರ ಮೇಲೂ ನಿಗಾ ಇದೆ ಎಂದು ಉಡುಪಿ ಡಿಎಚ್‍ಒ ಡಾ.ಸುಧೀರ್ ಚಂದ್ರಸೂಡ ಮಾಹಿತಿ ನೀಡಿದ್ದಾರೆ.