ಕೃಷ್ಣಮಠದಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆ- ರಥಬೀದಿಯಲ್ಲಿ ಮೆರವಣಿಗೆ

Public TV
1 Min Read
udp krishna mutt holi

ಉಡುಪಿ: ಹೋಳಿ ಹುಣ್ಣಿಮೆ ಒಂದು ದಿನದ ಆಚರಣೆಯಾದರೂ, ಕರಾವಳಿಯಲ್ಲಿ ಹೋಳಿ ಆಚರಣೆ ಮಾತ್ರ ಒಂದು ವಾರ ನಡೆಯುತ್ತದೆ. ಉಡುಪಿಯ ಸಾರ್ವಜನಿಕರು ಸಾಕಷ್ಟು ಮಂದಿ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಮಠ ಮತ್ತು ದೇವಸ್ಥಾನಗಳಲ್ಲಿ ಹೋಳಿ ಆಚರಣೆ ಬಹಳ ಅಪರೂಪ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಹೋಳಿ ಹುಣ್ಣಿಮೆಯ ಕಾಮದಹನ ಆಚರಿಸಲಾಯಿತು. ಉಡುಪಿ ಕೃಷ್ಣ ಮಠದ ಪೂಜಾ ಅಧಿಕಾರ ಪರ್ಯಾಯ ಅದಮಾರು ಮಠದ ಬಳಿ ಇದೆ. ಅದಮಾರು ಈಶಪ್ರಿಯತೀರ್ಥ ಸ್ವಾಮೀಜಿ ಅವರ ಆಣತಿಯಂತೆ ಹೋಳಿ ಹುಣ್ಣಿಮೆಯನ್ನು ರಥ ಬೀದಿಯಲ್ಲಿ ಆಚರಿಸಲಾಯಿತು. ಬಣ್ಣದ ಓಕುಳಿ ಇಲ್ಲದೆ ರಥಬೀದಿಯಲ್ಲಿ ಸಾಂಪ್ರದಾಯಿಕ ಆಚರಣೆ ಈ ಕಾಮ ದಹನ ನಡೆದಿದೆ.

udp krishna mutt holi 1

ಪ್ರತಿ ದಿನ ಶ್ರೀ ಕೃಷ್ಣನಿಗೆ ನಡೆಯುವ ಉತ್ಸವದಂತೆ ಹೋಳಿ ಹುಣ್ಣಿಮೆಯನ್ನು ಆಚರಿಸಲಾಯಿತು. ಹೋಳಿ ಹಿನ್ನೆಲೆಯಲ್ಲಿ ಕೃಷ್ಣ ಮಠದ ರಥಬೀದಿಯಲ್ಲಿ ಕಾಮನ ಭಾವಚಿತ್ರವನ್ನು ಹಿಡಿದು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಬಿರುದಾವಳಿಗಳು ಇದ್ದವು. ಮಠದ ಸಿಬ್ಬಂದಿ ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Share This Article
Leave a Comment

Leave a Reply

Your email address will not be published. Required fields are marked *