ದಲಿತ ಯುವಕನ ಮೇಲೆ ಗ್ರಾಂ.ಪಂ.ಅಧ್ಯಕ್ಷನಿಂದ ಹಲ್ಲೆ

Public TV
1 Min Read
kpl 5 e1583811348881

ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ದಲಿತ ಮತ್ತು ಸವರ್ಣಿಯರ ನಡುವೆ ಮಾರಾಮಾರಿ ನಡೆದ ಘಟನೆ ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾ.ಪಂ.ಅಧ್ಯಕ್ಷ ಅಂದಿಗಾಲಪ್ಪ ಹೊಳಿಯಾಚೆ ಮನೆ ಮುಂದೆ ಕಳೆದ ರಾತ್ರಿ ಕಾಮದಹನ ಮಾಡುವ ವೇಳೆ ಅದೇ ಗ್ರಾಮದ ದಲಿತ ಯುವಕನ್ನೊಬ್ಬ ಬಂದು ನೋಡಿದ್ದಾನೆ. ಇಷ್ಟಕ್ಕೇ ಕೋಪಿತನಾದ ಗ್ರಾ.ಪಂ.ಅಧ್ಯಕ್ಷ ಅಂದಿಗಾಲಪ್ಪ ಸೇರಿದಂತೆ ಅತನ ಕುಟುಂಬಸ್ಥರು, ನೀನ್ಯಾಕೆ ಇಲ್ಲಿಗೆ ಬಂದೆ ಎಂದು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಖಂಡಿಸಿ ದಲಿತರು ಪ್ರಶ್ನೆ ಮಾಡಲು ಹೋದಾಗಲು ದಲಿತರು ಮತ್ತು ಸವರ್ಣಿಯರ ನಡುವೆ ಮಾರಾಮಾರಿ ನಡೆದಿದೆ.

vlcsnap 2020 03 10 08h59m43s75 e1583811397709

ಕಲ್ಲು, ಬಡಿಗೆ, ಇಟ್ಟಿಗೆಗಳಿಂದ ತೂರಾಡಿಕೊಂಡಿದ್ದಾರೆ. ಇದರಿಂದ 9 ಜನರಿಗೆ ಗಾಯಗಳಾಗಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದಂತೆ ಕೊಪ್ಪಳ ಎಸ್‍ಪಿ ಸಂಗೀತಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *