ನಂಗೂ ಬೇಜಾರಾಗ್ತಿದೆ, ಬೈಕೋಬೇಡಿ ಎಂದ ಸಿಂಡ್ರೆಲ್ಲಾ

Public TV
2 Min Read
radhika pandit

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಇಂದು ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇನ್‍ಸ್ಟಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

ರಾಧಿಕಾ ಶೇರ್ ಮಾಡಿರುವ ವಿಡಿಯೋದಲ್ಲಿ, ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನ ಬೇರೆ ಜಾಗಗಳಿಂದ, ಬೇರೆ ಊರುಗಳಿಂದ ನನ್ನನ್ನು ಭೇಟಿ ಮಾಡಿ ವಿಶ್ ಮಾಡಲು ಬರುತ್ತೀರಾ ಎಂದು ನನಗೆ ಗೊತ್ತು. ಕಳೆದ ವರ್ಷ ಕೂಡ ಮಿಸ್ ಆಯ್ತು. ಈ ವರ್ಷ ದಯವಿಟ್ಟು ಯಾರು ಬೇಜಾರು ಮಾಡಿಕೊಳ್ಳಬೇಡಿ, ಬೈಕೋಬೇಡಿ. ಈ ವರ್ಷ ಕೂಡ ನಾನು ನನ್ನ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಏಕೆಂದರೆ ನನಗೆ ಇಬ್ಬರು ಪುಟಾಣಿ ಮಕ್ಕಳಿದ್ದಾರೆ. ಹಾಗಾಗಿ ಈ ವರ್ಷ ಹುಟ್ಟುಹಬ್ಬ ಆಚರಿಸುವುದು ಸ್ವಲ್ಪ ಕಷ್ಟ ಎಂದರು. ಇದನ್ನೂ ಓದಿ: ರಾಧಿಕಾ ಹುಟ್ಟುಹಬ್ಬ – ಅಭಿಮಾನಿಗಳಲ್ಲಿ ಯಶ್ ವಿಶೇಷ ಮನವಿ

radhika yash ayra

ಇದೇ ವೇಳೆ ನೀವು ಮಾಡುತ್ತಿರುವ ಮೆಸೇಜ್‍ಗಳು ಹಾಗೂ ಪ್ರೀತಿಯಿಂದ ಮಾಡುತ್ತಿರುವ ಕೆಲಸಗಳನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿದ್ದೇನೆ. ಎಲ್ಲಾ ಮೆಸೇಜ್‍ಗಳನ್ನು ಓದುತ್ತಿದ್ದೇನೆ, ಹಾಗೆಯೇ ರಿಪ್ಲೈ ಕೂಡ ಮಾಡುತ್ತೇನೆ. ನನಗೂ ಬೇಜಾರು ಆಗುತ್ತಿದೆ. ಯಾಕೆಂದರೆ ನನ್ನ ಹುಟ್ಟುಹಬ್ಬ ನಿಮ್ಮ ಜೊತೆ ಆಚರಿಸಿಲ್ಲ ಎಂದರೆ ಏನೋ ಅಪೂರ್ಣ ಎಂದು ಅನಿಸುತ್ತೆ. ಕಳೆದ ವರ್ಷ ಕೂಡ ಹುಟ್ಟುಹಬ್ಬ ಆಚರಿಸೋಕೆ ಆಗಿಲ್ಲ. ಮುಂದಿನ ವರ್ಷ ಭೇಟಿಯಾಗಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸೋಣ ಎಂದು ತಿಳಿಸಿದರು.

RADHIKA copy

ನಾನು ಈ ವಿಡಿಯೋ ಏಕೆ ಮಾಡುತ್ತಿದ್ದೇನೆ ಎಂದರೆ, ನನ್ನ ಹುಟ್ಟುಹಬ್ಬದಂದು ದೂರದ ಊರಿನಿಂದ ಅಭಿಮಾನಿಗಳು ಬರುತ್ತಾರೆ. ಈ ಬಾರಿ ಕೂಡ ಅವರು ಬಂದು ನಿರಾಸೆ ಆಗುವುದು ನನಗೆ ಇಷ್ಟ ಇಲ್ಲ. ಹಾಗಾಗಿ ನಾನು ಈ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಿದ್ದೇನೆ. ನಿಮ್ಮಲ್ಲರ ಪ್ರೀತಿ ಹಾಗೂ ಆಶೀರ್ವಾದ ನನ್ನ ಕುಟುಂಬಕ್ಕೆ ಸದಾ ಹೀಗೆ ಇರಲಿ. ಆದಷ್ಟು ಬೇಗ ಸಿಗೋಣ ಎಂದು ರಾಧಿಕಾ ವಿಡಿಯೋದಲ್ಲಿ ಹೇಳಿದರು.

ಗುರುವಾರ ಯಶ್ ಕಾರ್ಯಕ್ರಮವೊಂದರಲ್ಲಿ ರಾಧಿಕಾ ಹುಟ್ಟುಹಬ್ಬ ಬಗ್ಗೆ ಪ್ರತಿಕ್ರಿಯಿಸಿದ್ದರು. “ಈ ಬಾರಿ ರಾಧಿಕಾ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ. ನಮ್ಮ ಮನೆಯಲ್ಲಿ ಈಗ ಮಕ್ಕಳಿರುವುದರಿಂದ ಹಾಗೂ ಎಲ್ಲ ಕಡೆ ವೈರಸ್ ಹರಡುತ್ತಿರುವ ಕಾರಣ ತುಂಬಾ ಜನ ಸೇರುವುದು ಬೇಡ. ಈ ಬಾರಿ ಯಾವುದೇ ಆಚರಣೆ ಇಲ್ಲ. ಸಂಜೆ ನಾನು ಹಾಗೂ ರಾಧಿಕಾ ಒಟ್ಟಿಗೆ ಎಲ್ಲಿಯಾದರೂ ಹೋಗಿ ಕಾಲ ಕಳೆಯುತ್ತೇವೆ ಅಷ್ಟೇ” ಎಂದು ಯಶ್ ತಿಳಿಸಿದ್ದರು.

 

View this post on Instagram

 

A post shared by Radhika Pandit (@iamradhikapandit) on

Share This Article
Leave a Comment

Leave a Reply

Your email address will not be published. Required fields are marked *