ತೈಮೂರ್ ಬಳಿಕ ಮಾರುಕಟ್ಟೆಯಲ್ಲಿ ದೀಪಿಕಾ ಗೊಂಬೆ

Public TV
1 Min Read
Taimuru Deepika Doll

ಮುಂಬೈ: ನಟ ಸೈಫ್ ಅಲಿ ಖಾನ್ ಪುತ್ರ ತೈಮೂರ್ ಗೊಂಬೆಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕಿರಿಸಲಾಗಿತ್ತು. ಇದೀಗ ತೈಮೂರ್ ಬಳಿಕ ಬಾಲಿವುಡ್ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಗೊಂಬೆಗಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಪದ್ಮಾವತ್ 2018ರ ಯಶಸ್ವಿ ಸಿನಿಮಾಗಳಲ್ಲಿ ಒಂದಾಗಿದೆ. ಪದ್ಮಾವತಿ ಪಾತ್ರಕ್ಕೆ ನಟಿ ದೀಪಿಕಾ ಜೀವ ತುಂಬಿದ್ದರು. ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಗಳು, ಕಥೆ, ಕ್ಯಾಮೆರಾ ಕೈ ಚಳಕ, ನೃತ್ಯ, ಸಂಗೀತ ವೀಕ್ಷಕರನ್ನು ಸೆಳೆದಿದ್ದವು. ಇವೆಲ್ಲದರ ಜೊತೆ ದೀಪಿಕಾ ಧರಿಸಿದ್ದ ಒಡವೆಗಳು ಮಹಿಳೆಯರನ್ನು ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದ್ದವು.

ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಪದ್ಮಾವತ್ ಜ್ಯೂವೆಲ್ಸ್ ಹೆಸರಿನಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡಲಾಗಿತ್ತು. ಕೆಲ ಮಹಿಳೆಯರು ಬೆಲೆ ಬಾಳುವ ಪದ್ಮಾವತ್ ಚಿನ್ನಾಭರಣ ಧರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಪದ್ಮಾವತ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡ ಮಾದರಿಯಲ್ಲಿ ಗೊಂಬೆಗಳ ತಯಾರಿಸಲಾಗಿದೆ. ಇನ್ನು ಗೊಂಬೆಗಳಿಗೆ ಅದೇ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ.

Padmavati to become Padmavat

ಇತ್ತೀಚೆಗೆ ದೀಪಿಕಾ ಪಡುಕೋಣೆ ನಟನೆಯ ಮಹಿಳಾ ಪ್ರಧಾನ ಚಿತ್ರ ಛಪಾಕ್ ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಕ್ರಿಕೆಟಿಗ ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ಪತಿ ರಣ್‍ವೀರ್ ಗೆ ಜೊತೆಯಾಗಿ ನಟಿಸುತ್ತಿದ್ದಾರೆ. ರಾಮ್‍ಲೀಲಾ, ಬಾಜೀರಾವ್ ಮಸ್ತಾನಿ ಮತ್ತು ಪದ್ಮಾವತ್ ಬಳಿಕ ನಾಲ್ಕನೇ ಬಾರಿಗೆ ತೆರೆಯ ಮೇಲೆ ದೀಪ್-ವೀರ್ ಜೋಡಿ ಮೋಡಿ ಮಾಡಲು ಸಜ್ಜಾಗಿದೆ.

Share This Article
Leave a Comment

Leave a Reply

Your email address will not be published. Required fields are marked *