ನವದೆಹಲಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ದೆಹಲಿ ಸರ್ಕಾರ ರಜೆ ಘೋಷಿಸಿದೆ. ಐದನೇ ತರಗತಿವರೆಗಿನ ಮಕ್ಕಳಿಗೆ ರಜೆ ನೀಡುವಂತೆ ಸರ್ಕಾರ ಶಾಲೆಗಳ ಆಡಳಿತ ಮಂಡಳಿಗೆ ಸೂಚಿಸಿದೆ.
ದೆಹಲಿಯ ಗಡಿ ಭಾಗ ಘಾಜೀಬಾದ್‍ನಲ್ಲಿ ಇಂದು ಮತ್ತೊಂದು ಕೊರೊನಾ ಸೊಂಕು ಪ್ರಕರಣ ಪತ್ತೆಯಾಗಿದ್ದು, ದೇಶದಲ್ಲಿ 30ಕ್ಕೆ ವೈರಸ್ ಸೋಕಿಂತರ ಸಂಖ್ಯೆ ಏರಿಕೆಯಾಗಿದೆ. ಈ ಹಿನ್ನೆಲೆ ಮಕ್ಕಳಿಗೂ ಸಾಮೂಹಿಕವಾಗಿ ವೈರಸ್ ಹರಡುವ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.
ಇದರ ಜೊತೆಗೆ ಸರ್ಕಾರಿ ಉದ್ಯೋಗಿಗಳು ಹಾಜರಾತಿಗಾಗಿ ಬಯೋ ಮೆಟ್ರಿಕ್ ಬಳಸದಂತೆ ದೆಹಲಿ ಸರ್ಕಾರ ಆದೇಶಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಆದೇಶ ಹೊರಡಿಸಿದ್ದು ಬಯೋ ಮೆಟ್ರಿಕ್‍ನಿಂದಲೂ ವೈರಸ್ ಹರಡುವ ಸಾಧ್ಯತೆಗಳಿದೆ. ಈ ಹಿನ್ನೆಲೆ ತಾತ್ಕಾಲಿಕವಾಗಿ ಬಯೋ ಮೆಟ್ರಿಕ್ ಹಾಜರಾತಿ ರದ್ದು ಮಾಡಿಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.