ಬೆಂಗಳೂರು: ಬಜೆಟ್‍ನಲ್ಲಿ ಕೊಟ್ಟಿರುವ ಅನುದಾನ ಸುಣ್ಣ-ಬಣ್ಣ ಬಳಿಯಲೂ ಸಾಕಾಗೋಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಿಎಂ ಯಡಿಯೂರಪ್ಪ ಅವರ ಬಜೆಟ್ ಮಂಡನೆಯನ್ನು ಟೀಕಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಬಜೆಟ್‍ನ ಎರಡನೇ ಪುಟದಲ್ಲೋ 3ನೇ ಪುಟದಲ್ಲೋ ನರೇಂದ್ರ ಮೋದಿ ಅವರ ಮಾರ್ಗದಲ್ಲಿ ಹೋಗುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಕೇಂದ್ರದ ಅನುದಾನ ಬರಲ್ಲ, ಅದಕ್ಕೆ ಹೀಗೆ ಬಜೆಟ್‍ನಲ್ಲಿ ಏನು ಇಲ್ಲ ಎಂದರು. ಇದನ್ನೂ ಓದಿ: ಮಾರಾಟ ತೆರಿಗೆ ಏರಿಕೆ – ಹೆಚ್ಚಳವಾಗಲಿದೆ ಪೆಟ್ರೋಲ್, ಡೀಸೆಲ್ ದರ
ನಮ್ಮ ರಾಜ್ಯ ತೆರೆಗೆ ಸಂಗ್ರಹದಲ್ಲಿ ಇಷ್ಟೆಲ್ಲಾ ಬಿಕ್ಕಟ್ಟು ಇದ್ದರೂ ಹಿಂದೆ ಬಿದ್ದಿಲ್ಲ. ಕಳೆದ ಬಾರಿ ನಾವು ಬಜೆಟ್ ಮಂಡನೆ ಮಾಡಿದಾಗ ಏನು ನಿರೀಕ್ಷೆ ಇಟ್ಟುಕೊಂಡಿದ್ದೆವೋ, ಆ ನಿರೀಕ್ಷೆ ಹತ್ತಿರ ಹೋಗಿದ್ದೇವೆ. ಶೇ. 14 ರಷ್ಟು ಹೆಚ್ಚಿನ ತೆರೆಗೆ ಸಂಗ್ರಹ ಕೂಡ ಆಗಿದೆ ಎಂದರು.
ಈಗ ಕೊಟ್ಟಿರುವ ಹಣ ನೋಡಿದರೆ, ಅದರಲ್ಲೂ ಆರೋಗ್ಯ ಇಲಾಖೆಗೆ ಕೊಟ್ಟಿರುವ ಅನುದಾನದಲ್ಲಿ ಸುಣ್ಣ-ಬಣ್ಣ ಬಳಿಯಲು ಸಾಧ್ಯವಿಲ್ಲ. ಬಜೆಟ್‍ನಲ್ಲಿ ಯಾವುದು ಸ್ಪಷ್ಟನೆ ಆಗಿಲ್ಲ. ನಮ್ಮ ಯೋಜನೆಯನ್ನು ಈ ಸರ್ಕಾರ ಮುಂದುವರಿಸುವುದಕ್ಕೆ ಸಾಧ್ಯನೆ ಇಲ್ಲ. ಹೀಗಾಗಿ ಈ ಸರ್ಕಾರ ಜನರಿಗೆ ಯಾವುದೇ ರೀತಿಯ ಸ್ಪಷ್ಟನೆ ಕೊಡಲು ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ಬಜೆಟ್ ಅನ್ನು ಟೀಕಿಸಿದರು.