ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊದಲ ಕೊರೊನಾ ವೈರಸ್ ಸೊಂಕು ಖಚಿತವಾಗುತ್ತಿದ್ದಂತೆ ಜನ ಹೈ ಅಲರ್ಟ್ ಆಗಿದ್ದಾರೆ.
ಈ ಕೊರೊನಾ ವೈಸರ್ ಹೆಸರೇ ಭಯಾನಕವಾಗಿದೆ. ಹೇಗೆ ಬರುತ್ತೆ ಅನ್ನೋದೇ ಗೊತ್ತಾಗುವುದಿಲ್ಲ. ಕೊರೊನಾ ವೈರಸ್ ಸೊಂಕಿತರ ಸಂಪರ್ಕ ಮಾಡಿದರೆ ಅಲ್ಲ ಅವರ ಬಳಿ ಹೋದರು ವೈರಸ್ ಬರುತ್ತೆ. ಅದಕ್ಕಾಗಿ ಓಲಾ ಉಬರ್ ಡ್ರೈವರ್ ಗಳು ಎಸಿ ಹಾಕುತ್ತಿಲ್ಲ.
ನಮಗೆ ಆರೋಗ್ಯವೇ ಮುಖ್ಯ ಎಸಿ ಹಾಕಿದರೆ ಉಸಿರಾಡುವ ಗಾಳಿ ಕಾರಿನ ಒಳಗಡೆ ಇರುತ್ತದೆ. ಅದಕ್ಕಾಗಿ ನಾವೂ ಎಸಿ ಬಳಕೆ ಮಾಡುವುದನ್ನು ನಿಲ್ಲಿಸಿದ್ದೇವೆ ಎಂದು ಚಾಲಕರು ಹೇಳಿದ್ದಾರೆ. ಇದನ್ನು ಓದಿ: ಈಗ ಅಧಿಕೃತ – ಭಾರತಕ್ಕೆ ಆಗಮಿಸಿದ 21 ಇಟಲಿ ಪ್ರವಾಸಿಗರ ಪೈಕಿ 15 ಮಂದಿಗೆ ಕೊರೊನಾ
ಎಸಿ ಕತೆ ಹೀಗಾದರೆ ಅಪ್ಪಿ ತಪ್ಪಿ ಏರ್‌ಪೋರ್ಟ್ ಡ್ಯುಟಿ ಏನಾದರೂ ಸಿಕ್ಕಿದರೇ ಹೋಗಬೇಕೇ ಬೇಡವೇ ಎಂದು ಯೋಚನೆ ಮಾಡುತ್ತಿದ್ದಾರೆ. ವಿದೇಶದಿಂದ ಆಗಮಿಸಿದ ವ್ಯಕ್ತಿಗಳಲ್ಲೇ ಕೊರೊನಾ ಸೋಂಕು ತಗಲಿರುವುದರಿಂದ ವಿಮಾನ ನಿಲ್ದಾಣದ ಕಡೆ ಹೋಗಲು ಬಹಳ ಅಲೋಚನೆ ಮಾಡುತ್ತಿದ್ದಾರೆ.