_ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಬೆಸ್ಟ್ ಫ್ರೆಂಡ್
ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ, ಶತಾಯುಷಿ ಪಂಡಿತ್ ಸುಧಾಕರ ಚತುರ್ವೇದಿ ಅವರು ಇಂದು ಬೆಳಗ್ಗೆ ದೈವಾಧೀನರಾಗಿದ್ದಾರೆ.
ತುಮಕೂರಿನ ಕ್ಯಾತಸಂದ್ರದಲ್ಲಿ 20ನೇ ಏಪ್ರಿಲ್ 1897ರಲ್ಲಿ ಜನಿಸಿದ ಸುಧಾಕರ ಚತುರ್ವೇದಿ ಅವರು 125 ವರ್ಷ ಬದುಕಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಗಾಂಧೀಜಿಯವರ ಬೆಸ್ಟ್ ಫ್ರೆಂಡ್ ಎನಿಸಿಕೊಂಡಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಚಳುವಳಿಯಾದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಗಳೂ ಆಗಿದ್ದರು. ಜೊತೆಗೆ ದೇಶಕ್ಕಾಗಿ ಮಡಿದ ಹುತಾತ್ಮರಿಗೆ ಸಂಸ್ಕಾರ ಮಾಡುತ್ತಿದ್ದರು.
ಸುಧಾಕರ ಚತುರ್ವೇದಿ ಅವರು ವೀರಸನ್ಯಾಸಿ ಸ್ವಾಮಿ ಶ್ರೀ ಶ್ರದ್ಧಾನಂದರ ಶಿಷ್ಯರಾಗಿ ವೇದಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ ವೇದ ಪ್ರಚಾರಕ್ಕಾಗಿ ಸುಮಾರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ನಾಲ್ಕು ಭಾಷೆಗಳಲ್ಲಿ ರಚಿಸಿದ್ದಾರೆ. ಋಗ್ವೇದ ದರ್ಶನ ಭಾಗ-1, ಭಗವಾನ್ ಶ್ರೀರಾಮಚಂದ್ರ, ವೇದೋಕ್ತ ಜೀವನ ಪಥ, ಉಪನಿಷತ್ ಭಾಷ್ಯ, ಮುಂತಾದವುಗಳು ಇವರ ಜನಪ್ರಿಯ ಕೃತಿಗಳು. ಇದರ ಜೊತೆಗೆ ಇವರಿಗೆ ಅನೇಕ ಪ್ರಶಸ್ತಿಗಳು ಬಿರುದುಗಳು ನೆನಪಿನ ಫಲಕಗಳು ಸಂದಿವೆ.
ಶಿಷ್ಯರ ಜೊತೆ ವಾರಕ್ಕೊಮ್ಮೆ ಸತ್ಸಂಗವನ್ನು ನಡೆಸುತ್ತಾ, ವಿಚಾರ ಮಂಥನ ನಗಿಸುತ್ತಿರುವುದೇ ಶತಾಯುಷಿಗಳ ಆರೋಗ್ಯದ ಗುಟ್ಟು ಎಂಬುದು ಕುಟುಂಬಸ್ಥರ ಅಭಿಪ್ರಾಯವಾಗಿದೆ.