ಆಕ್ಸಿಡೆಂಟ್ ವಿವಿಐಪಿ..!

Public TV
3 Min Read
DODAVARA ACCIDENT main

-ದೊಡ್ಡವರ ಮಕ್ಕಳ ದರ್ಬಾರ್

ಮುರಳೀಧರ್ ಎಚ್.ಸಿ
ಸಮಾಜಕ್ಕೆ ಇವರು ಮಾರಕವೋ ಉಪಕಾರವೋ ಗೊತ್ತಿಲ್ಲ. ಆದ್ರೆ, ಇವರನ್ನು ಸಮಾಜದಲ್ಲಿ ದೊಡ್ಡವರು ಸೋ ಕಾಲ್ಡ್ ವಿವಿಐಪಿಗಳು ಅಂತಾರೆ. ಸಮಾಜದ ಪ್ರತಿಷ್ಠಿಗೆ ಬದುಕೋ ಇಂತಹ ಜನ ಮಾಡೋದೆಲ್ಲ ಮಣ್ಣು ತಿನ್ನೋ ಕೆಲ್ಸಾ. ಸಮಾಜದಲ್ಲಿ ಇವರಿಗೆ ಇವರದ್ದೇ ಆದ ಗೌರವ, ಪ್ರತಿಷ್ಠೆ ಎಲ್ಲಾ ಇರುತ್ತೆ. ಇವರನ್ನು ನೋಡಿದ್ರೆ ಸೆಲ್ಯೂಟ್ ಕೂಡ ಮಾಡ್ಬೇಕು. ಅದೆಷ್ಟೋ ಜನ ತನ್ನ ಕೈ ಕೆಳಗೆ ಕೆಲಸ ಮಾಡೋರು ಸೆಲ್ಯೂಟ್ ಮಾಡಿಲ್ಲ ಕೆಲಸದಿಂದ ತೆಗೆಯೋದರ ಜೊತೆಗೆ ಒದ್ದಿದ್ದನ್ನೂ ನೋಡಿ ಆಗಿದೆ.

MURALI KANDDDU KELIDDU

ದುಡ್ಡಿದ್ದವನೇ ದೊಡ್ಡಪ್ಪ, ವಿದ್ಯೆ ಅದರಪ್ಪ. ಆದ್ರೆ, ದುಡ್ಡಿದವರು ಮಾತ್ರ ಮಾಡೋದು ಒಂದಾ ಎರಡಾ? ದಿನಕ್ಕೊಂದು ಗಲಾಟೆ ಮಾಡ್ತಾರೆ, ಗಲಾಟೆಯಿಂದ ತಪ್ಪಿಸಿಕೊಳ್ಳೋದಕ್ಕೆ ವಿದ್ಯೆಯನ್ನೇ ಬಳಸೋದಿಲ್ಲ. ಅದಕ್ಕೆ ದುಡ್ಡೇ ದೊಡ್ಡಪ್ಪ, ವಿದ್ಯೆ ಅದರಪ್ಪ ಅಂದಿದ್ದು. ಸಣ್ಣ ವಿಚಾರವನ್ನೂ ಕೂಡ ದೊಡ್ಡದು ಮಾಡಿಕೊಳ್ಳೋ ಈ ದೊಡ್ಡ ಮನುಷ್ಯರ ದಡ್ಡತನ ಎಷ್ಟು ಅನ್ನೋದನ್ನ ತೋರಿಸುತ್ತದೆ.

ಅವತ್ತು ಒಂದೇ ದಿನಾ, ಒಂದೇ ಸಮಯ ಆದ್ರೆ ಸ್ಥಳ ಬೇರೆ ಬೇರೆಯದ್ದು, ಘಟನೆ ಮಾತ್ರ ಅಪಘಾತ. ನಿಮಗೆ ನೆನಪಿರಬಹುದು ಒಂದು ಬೆಂಗಳೂರಿನ ಅಪಘಾತವಾದ್ರೆ ಮತ್ತೊಂದು ಬಳ್ಳಾರಿಯದ್ದು, ಆದ್ರೆ, ಆ ಎರಡು ಅಪಘಾತದಲ್ಲೂ ಕೂಡ ಕಂಡು ಕಾಣಿಸಿಕೊಳ್ಳದವರು ವಿವಿಐಪಿಯ ಮಕ್ಕಳು ಈ ಮಕ್ಕಳೇ ಒಮ್ಮೊಮ್ಮೆ ಅಪ್ಪನ ರಾಜಕೀಯ ಬದುಕಿಗೆ ಕೆಸರನ್ನು ಎರಚಿ ಬಿಡ್ತಾರೆ.

ಬಳ್ಳಾರಿ ಪ್ರಕರಣಕ್ಕಿಂತ ಮುನ್ನ ಸದ್ದು ಮಾಡಿದ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದ ಅಪಘಾತ. ಹೌದು, ಮೊದಲೇ ಜೈಲಿಗೆ ಹೋಗಿ ಬಂದಿದ್ದ ಮಹಮದ್ ನಲ್ಪಾಡ್ ಮತ್ತದೇ ಹೊಸ ಕಾಂಟ್ರವರ್ಸಿಯನ್ನು ಮಾಡಿಕೊಂಡಿದ್ದ. ಬೆಂಗಳೂರಿನಂತಹ ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿ ರೇಸ್‍ಗೆ ನಿಂತಿದ್ದ ನಲ್ಪಾಡ್ ಅಂಡ್ ಗ್ಯಾಂಗ್ ಬೆಂಗಳೂರಿನ ಮೂಲೆ ಮೂಲೆಗಳಲ್ಲೂ ಕೂಡ ಕಾರಿನ ಸದ್ದನ್ನ ಎಬ್ಬಿಸಿದ್ರು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೈ ಸ್ಪೀಡ್‍ನಲ್ಲಿ ಓಡಾಡ್ತಿದ್ದ ಕಾರು ರಸ್ತೆಯಲ್ಲಿ ಇದ್ದವರ ಜೀವ ಬಾಯಿಗೆ ಬರೋ ಹಾಗೇ ಮಾಡುತ್ತಿತ್ತು.

BLY CCTV 01

ಈ ಹೈ ಸ್ಪೀಡ್ ಕಾರು ಅಮಾಯಕರ ಜೀವದ ಜೊತೆ ಚೆಲ್ಲಾಟ ಆಡುತ್ತಾ ಮುಂದೆ ನುಗ್ಗುತ್ತಿದ್ದರೆ, ಕಾರಿನ ಒಳಗಿದ್ದವರಿಗೆ ಅವರದ್ದೇ ಮೋಜು ಮಸ್ತಿ. ರಸ್ತೆ ಯಾರಪ್ಪನ ಆಸ್ತಿ ಅನ್ನೋ ಹಾಗೆ ನುಗ್ಗಿತ್ತು. ಅಷ್ಟು ಸ್ಪೀಡ್‍ನಲ್ಲಿ ಇದ್ದ ಕಾರು ಒಂದು ಕಡೆ ಡಿಕ್ಕಿ ಹೊಡೆದೇ ಬಿಟ್ಟಿತ್ತು. ಇದೆಲ್ಲಾ ಸಾರ್ವಜನಿಕವಾಗಿ ಎಲ್ಲರಿಗೂ ತಿಳಿದಿತ್ತು ಬಿಡಿ. ಆದ್ರೆ, ತೆರೆಮರೆಯಲ್ಲಿ ನಡೆದಿದ್ದೇ ಬೇರೆ. ಅಪಫಾತ ಮಾಡಿದವ ಅಲ್ಲಿಂದ ಗಾಯಬ್ ಆದ ಬಳಿಕ ಇಡೀ ಸೀನ್ ಎಂಟ್ರಿಕೊಟ್ಟಿದ್ದು ಬಾಲು ಅನ್ನೋ ಹುಡ್ಗ. ಆತನಿಗೆ ಐಷರಾಮಿ ಕಾರನ್ನು ಓಡಿಸೋದಕ್ಕೆ ಇರಲಿ ಕಾರಿನ ಲಾಕ್ ಕೂಡ ಓಪನ್ ಮಾಡೋದಕ್ಕೆ ಬರುತ್ತಿರಲಿಲ್ಲ. ಹೀಗಿದ್ದ ಹುಡುಗನನ್ನು ಬಿಟ್ಟ ಆಟ ಆಡೋದಕ್ಕೆ ಮುಂದಾಗಿದ್ದ ದೊಡ್ಡವರ ಮಗ.

ಪೊಲೀಸ್ರು ಕೂಡ ಯಾವ ಮಾಹಿತಿ ಹಿಡಿಬೇಕೋ. ಯಾವ ಮೂಲಕ ಅವನಿಗೆ ಬಿಸಿ ತಟ್ಟಿಸಬೇಕೋ ತಟ್ಟಿಸಿದ್ರು ಬಿಡಿ. ಕೊನೆಗೆ ಸೋಕಾಲ್ಡ್ ದೊಡ್ಡವರ ಮಗ ನಲ್ಪಾಡ್‍ಗೆ ಪೊಲೀಸ್ರು ನೋಟಿಸ್ ಕೊಟ್ಟಿದ್ರು. ಬಳಿಕ ಅವನ ವಿಚಾರಣೆಯೂ ನಡೆಯಿತು. ಆದ್ರೆ, ಇವೆಲ್ಲದರ ಮಧ್ಯೆ ಮೊತ್ತೊಬ್ಬ ದೊಡ್ಡವರ ಮಗ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದ ಫನ್ ವರ್ಡ್ ಮಾಲೀಕರ ಮಗ ಸನ್ನಿ ಅನ್ನೋನು ಕೂಡ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

BLY CCTV 02

ನಲ್ಪಾಡ್‍ದು ಒಂದು ರೀತಿಯ ಇನ್ಸಿಡೆಂಟ್ ಆದ್ರೆ ಸನ್ನಿಯದ್ದು ಇನ್ನೋಂದು ರೀತಿಯ ಗಲಾಟೆ. ಕಾರನ್ನು ಸ್ಟಾರ್ಟ್ ಮಾಡಿಕೊಂಡು ರಸ್ತೆಯಲ್ಲಿ ನುಗಿದ್ದವ ರಸ್ತೆಯ ಚೌಕಿಗಳಿಗೆಲ್ಲಾ ಢಿಕ್ಕಿ ಹೊಡೆದಿದ್ರು ಈ ಸಾಹೆಬ್ರು. ಕಾರನ್ನು ಡಿಕ್ಕಿ ಮಾಡಿದ್ದು ಅಲ್ಲದೇ ಗುದ್ದಿದ ಜಾಗದಲ್ಲೇ ನಿಂತು ಸೆಲ್ಫಿಯನ್ನು ತೆಗೆದುಕೊಂಡಿದ್ದ. ಸೆಲ್ಪಿ ತೆಗೆದುಕೊಂಡು ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.

ಇದಿಷ್ಟು ತಣ್ಣಗಾಗುವ ಹೊತ್ತಿಗೆ ಸುಂಟರಗಾಳಿಯಂತೆ ಎದ್ದಿದ್ದು ಮಾತ್ರ ಸಚಿವರ ಪುತ್ರನ ಆಕ್ಸಿಡೆಂಟ್ ಕೇಸ್. ಒಂದೇ ಸಮಯಕ್ಕೆ ಎರಡು ಘಟನೆ ನಡೆದಿದ್ದು ಅದಿದ್ದು ಇದೇ ಬಳ್ಳಾರಿ ಆಕ್ಸಿಡೆಂಟ್ ಕೇಸ್. ಬಳ್ಳಾರಿ ಆಕ್ಸಿಡೆಂಟ್ ಕೇಸ್‍ನ ರೋಚಕತೆ ಅಷ್ಟಿಷ್ಟಲ್ಲ. ಒಂದೇ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ರು. ಈ ರೀತಿ ಸಾವನ್ನಪ್ಪಿದವರ ಪ್ರಕರಣಕ್ಕೆ ಇನ್ನೂ ಸಂಪೂರ್ಣ ಚಿತ್ರಣ ಹೊರಗೆ ಬಂದಿಲ್ಲ. ಕಾರಿನೊಳಗೆ ಇದ್ದವರು ಯಾರು ಗುದ್ದಿದವರು ಯಾರು ಎನ್ನುವುದನ್ನು ಇನ್ನೂ ಪೊಲೀಸರು ಹುಡುಕುತ್ತಲೇ ಇದ್ದಾರೆ. ಪೊಲೀಸ್ರು ಮಾತ್ರ ಹಾಸಿಹೊದ್ದಿಕೊಂಡು ಮಲಗಿಬಿಟ್ಟಿದ್ರು.

BLY CCTV 03

ಆ ಕೇಸ್ ಅಲ್ಲಿ ಕೂಡ ಬೇರೆಯವರ ತಲೆ ಕಟ್ಟೋದಕ್ಕೆ ನಡೆದ ಹುನ್ನಾರ ಅಷ್ಟಿಷ್ಟಲ್ಲ. ರಾಹುಲ್ ಅನ್ನೋ ಹುಡುಗನ ತಂದ್ರು ಆತನ ತಲೆಗೆ ಕಟ್ಟಿದ್ರು. ಅವನನ್ನೇ ಆರೋಪಿಯನ್ನಾಗಿ ಮಾಡಿ ಸಚಿವರ ಮಗನನ್ನು ಬಿಟ್ಟೇ ಬಿಟ್ರು. ಆದ್ರೀಗ ಇಡೀ ಪ್ರಕರಣ ಅನುಮಾನದ ಸುತ್ತವೇ ಸುತ್ತಿಕೊಂಡಿದೆ.

ಇದೇ ಈ ಗಣ್ಯಾತೀಗಣ್ಯರು ಮಾಡೋ ಘನಾಂಧಾರಿ ಕೆಲಸಗಳು. ಈ ಕೆಲಸಗಳಿಂದ ಸಮಾಜದ ಸ್ವಾಸ್ಥ್ಯವೂ ಹಾಳಾಗಿದೆ. ಇವರ ಈ ನಡತೆಗೆ ವಿವಿಐಪಿ ಅನ್ಬೇಕು ಇದೇ ಅಲ್ವಾ ದುರಂತ.

[ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]

Share This Article
Leave a Comment

Leave a Reply

Your email address will not be published. Required fields are marked *