– ಪ್ರೀತಿಯನ್ನು ನಿರಾಕರಿಸಿದ ಯುವತಿಯ ಪೋಷಕರು
ಲಕ್ನೋ: ಪೋಷಕರು ಮದುವೆಗೆ ಒಪ್ಪದ ಕಾರಣ ಪೊಲೀಸ್ ಠಾಣೆಯಲ್ಲೇ ಜೋಡಿಯ ವಿವಾಹ ಮಾಡಿಸಿದ ಅಪರೂಪದ ಸಂಗತಿಯೊಂದು ಉತ್ತರ ಪ್ರದೇಶದ ಲಕ್ನೋ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮನೀಶ್ ಹಾಗೂ ಕಿರಣ್ ಪೊಲೀಸ್ ಠಾಣೆಯಲ್ಲಿ ಮದುವೆಯಾದ ಜೋಡಿ. ಮನೀಶ್ ಹಾಗೂ ಕಿರಣ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಯುವತಿಯ ಮನೆಯವರು ಒಪ್ಪಲಿಲ್ಲ. ಹಾಗಾಗಿ ಇಬ್ಬರು ಸಹಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದರು.
ಪ್ರೇಮಿಗಳ ಸಹಾಯಕ್ಕೆ ಪೊಲೀಸರು ನಿಂತಿದ್ದು, ಪೊಲೀಸ್ ಠಾಣೆಯಲ್ಲಿಯೇ ಇಬ್ಬರ ಮದುವೆ ಮಾಡಿಸಿದ್ದಾರೆ. ಈ ಮದುವೆ ಲಕ್ನೋನ ಮಹಿಳಾ ಪೊಲೀಸ್ ಠಾಣೆಯಲ್ಲಿ ಜರುಗಿತು. ಮದುವೆಯಲ್ಲಿ ಬೇರೆ ಪೊಲೀಸ್ ಅಧಿಕಾರಿಗಳ ಜೊತೆ ಪೊಲೀಸ್ ಕಮಿಷನರ್ ಕೂಡ ಭಾಗವಹಿಸಿದ್ದರು. ಸದ್ಯ ಮದುವೆಯ ಫೋಟೋಗಳು ವೈರಲ್ ಆಗುತ್ತಿದೆ.
A couple tied the knot at Lucknow women's police station under the supervision of Police Commissioner, yesterday. The couple had approached police seeking security, as family of the bride disapproved of the wedding. pic.twitter.com/yJbKoLVEDl
— ANI UP/Uttarakhand (@ANINewsUP) February 17, 2020
ಪ್ರಿಯಕರನ ಮನೆಯಲ್ಲಿ ವಾಸಿಸಲು ಯುವತಿ ತನ್ನ ಮನೆಯನ್ನು ಬಿಟ್ಟು ಬಂದಿದ್ದಳು. ಇದನ್ನು ತಿಳಿದ ಆಕೆಯ ಪೋಷಕರು ಬೆದರಿಕೆ ಹಾಕಲು ಶುರು ಮಾಡಿದ್ದರು. ಬೆದರಿಕೆಗೆ ಹೆದರಿದ ಪ್ರೇಮಿಗಳು ಸಹಾಯಕ್ಕಾಗಿ ಪೊಲೀಸ್ ಕಮಿಷನರ್ ಮನೆಗೆ ತಲುಪಿದ್ದರು.
ಪ್ರೇಮಿಗಳ ಮಾತು ಕೇಳಿ ಪೊಲೀಸ್ ಕಮಿಷನರ್ ಇಬ್ಬರ ಮದುವೆ ಮಾಡಿಸಲು ನಿರ್ಧರಿಸಿದ್ದರು. ಶಾರದಾ ಚೌಧರಿ ಈ ಮದುವೆಯ ನೇತೃತ್ವ ವಹಿಸಿ ಸೋಮವಾರ ಮನೀಶ್ ಹಾಗೂ ಕಿರಣ್ ಮದುವೆಯನ್ನು ಪೊಲೀಸ್ ಠಾಣೆಯಲ್ಲಿ ಮಾಡಿಸಿದ್ದರು.