ಸ್ಯಾಂಡಲ್‍ವುಡ್‍ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ `ಮೌನಂ’ ಫೆಬ್ರವರಿ 21ಕ್ಕೆ ಯಶಸ್ವಿಯಾಗಿ ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರ ಒಂದಕ್ಕಿಂತ ಒಂದು ಚೆಂದದ ಹಾಡುಗಳ ರಸದೌತಣ ನೀಡುತ್ತಿದೆ. ಈ ಹಿಂದೆ ನಿನ್ನ ಉಸಿರಲ್ಲಿಯೇ ಎಂಬ ರೋಮ್ಯಾಂಟಿಕ್ ಸಾಂಗ್ ಮೂಲಕ ಗಮನ ಸೆಳೆದ ಈ ಚಿತ್ರ ಇದೀಗ ಚಿತ್ರ ಬಹು ನಿರೀಕ್ಷಿತ `ಕಂದ ನಿನ್ನ ಕನಸಿಗೆ’ ಹಾಡಿನ ವಿಡಿಯೋ ರಿಲೀಸ್ ಮಾಡಿದೆ.
ನಿರೀಕ್ಷೆ ಹುಟ್ಟಿಸಿರುವ ಮೌನಂ ಚಿತ್ರದ ವಿಜಯ್ ಪ್ರಕಾಶ್ ಹಾಡಿರುವ ಕಂದ ನಿನ್ನ ಕನಸಿಗೆ ಎಂಬ ಹಾಡನ್ನ ಶ್ರೀ ಪರಮಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಮೌನಂ ಚಿತ್ರದ ಯಶಸ್ಸಿಗೆ ಆಶೀರ್ವದಿಸಿ, ಸಿನಿಮಾ ಬಿಡುಗಡೆಗೆ ಕಾಯ್ತಿರೋದಾಗಿ ಹೇಳಿದ್ದಾರೆ.
ಅಪ್ಪ-ಮಗನ ಬಾಂದವ್ಯ ಈ ಹಾಡಿನಲ್ಲಿದ್ದು, ವಿಜಯ್ ಪ್ರಕಾಶ್ ಹಾಡಿರುವ ಈ ಹಾಡು ಪ್ರತಿಯೊಬ್ಬರನ್ನು ಕಾಡಲು ಶುರುಮಾಡಿದೆ. ಆರವ್ ರಿಶಿಕ್ ಸಂಗೀತ, ಆಕಾಶ್ ಎಸ್ ಸಾಹಿತ್ಯದಲ್ಲಿ ಅರಳಿದ ಈ ಹಾಡು ಮೆಚ್ಚುಗೆ ಪಡೆದುಕೊಂಡಿದೆ. ನಿಶಬ್ದಕ್ಕೂ ಶಬ್ದವಿದೆ ಎಂಬ ಟ್ಯಾಗ್ ಲೈನ್ ಮೂಲಕ ಗಮನ ಸೆಳೆದಿರುವ `ಮೌನಂ’ ಚಿತ್ರದಲ್ಲಿ ಬಾಲಾಜಿ ಶರ್ಮಾ, ನಟಿ ಮಯೂರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಹಿರಿಯ ನಟ ಅವಿನಾಶ್ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ. ಹೊಸ ಪ್ರತಿಭೆ ರಾಜ್ ಪಂಡಿತ್ ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳಿರುವ `ಮೌನಂ’ ಚಿತ್ರ ಸಖತ್ ಟಾಕ್ ಕ್ರಿಯೇಟ್ ಮಾಡಿದೆ. ಸಸ್ಪೆನ್ಸ್ ಅಂಡ್ ಥ್ರಿಲ್ಲಿಂಗ್ ಸಬ್ಜೆಕ್ಟ್ ಒಳಗೊಂಡಿರೋ ಈ ಚಿತ್ರಕ್ಕೆ ಶ್ರೀಹರಿ ಬಂಡವಾಳ ಹೂಡಿದ್ದಾರೆ. ಸಾಕಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿರೋ ಈ ಚಿತ್ರ ಇದೇ ತಿಂಗಳ 21ಕ್ಕೆ ಬಿಡುಗಡೆಯಾಗುತ್ತಿದೆ.