ಪುಟ್ಟ ಬಾಲಕನ ಆಸೆ ಈಡೇರಿಸಿ ಆಸ್ಪತ್ರೆ ಖರ್ಚು ಭರಿಸಿದ ಅಪ್ಪು

Public TV
1 Min Read
1 puneeth

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮನ್ನ ನೋಡಲು ಕಾಯುತ್ತಿದ್ದ 16 ವರ್ಷದ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ. ಜೊತೆಗೆ ಪುಟ್ಟ ಅಭಿಮಾನಿಯ ಆಸ್ಪತ್ರೆಯ ಖರ್ಚನ್ನು ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

16 ವರ್ಷದ ಬಾಲಕ ಆದರ್ಶ್, ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯಾಗಿದ್ದು, ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಬಳ್ಳಾರಿ ಜಿಲ್ಲೆಯ ಹೊಸಪೇಟ್ ನಗರದ ಇಂದಿರ ನಗರ ನಿವಾಸಿಗಳಾದ ಹನಮಂತ್ ಮತ್ತು ರೇಖಾ ದಂಪತಿಯ ಹಿರಿಯ ಮಗನಾಗಿರುವ ಆದರ್ಶ್ ಹುಟ್ಟಿದ್ದಾಗಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಪುನೀತ್ ರಾಜ್‍ಕುಮಾರ್ ಎಂದರೆ ಬಾಲಕನಿಗೆ ಪಂಚಪ್ರಾಣ. ಹೀಗಾಗಿ ಪುನೀತ್‍ರನ್ನು ಒಮ್ಮೆಯಾದರೂ ಭೇಟಿಯಾಗಬೇಕೆಂದು ಕನಸು ಕಂಡಿದ್ದನು. ಇದನ್ನೂ ಓದಿ: ಪುನೀತ್‌ರನ್ನು ನೋಡಲು ಅಂಗೈಯಲ್ಲಿ ಜೀವ ಹಿಡಿದುಕೊಂಡು ಕುಳಿತಿದ್ದಾನೆ ಬಾಲಕ

bly puneeth fan 1

ಪುನೀತ್ ಅವರನ್ನು ಒಮ್ಮೆ ಆದರೂ ಆದರ್ಶ್ ಭೇಟಿ ಮಾಡಬೇಕು ಎಂದು ಆತನ ಪೋಷಕರು ಪ್ರಯತ್ನಿಸಿದ್ದಾರೆ. ಕಳೆದ ಎರಡು ಬಾರಿ ಪುನೀತ್ ಹೊಸಪೇಟೆಗೆ ಬಂದಾಗಲೂ ಪ್ರಯತ್ನಿಸಿದ್ದು, ಆದರೆ ನೂರಾರು ಅಭಿಮಾನಿಗಳ ಅಬ್ಬರದಲ್ಲಿ ಅದು ಸಾಧ್ಯವಾಗಲಿಲ್ಲ. ಇದೀಗ ಬಾಲಕನ ಕನಸು ನನಸಾಗಿದೆ. ಪುನೀತ್ ರಾಜ್‍ಕುಮಾರ್ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ.

2 puneeth 1581488521

ಈ ಪುಟ್ಟ ಅಭಿಮಾನಿಯ ಬಗ್ಗೆ ತಿಳಿದ ಪುನೀತ್ ಬಾಲಕನನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಮಂಗಳವಾರ ಪುನೀತ್ ಮನೆಗೆ ಬಂದ ಆದರ್ಶ್ ಮತ್ತು ಕುಟುಂಬದವರನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಬಾಲಕನ ಜೊತೆ ಕೆಲ ಸಮಯ ಕಾಲ ಕಳೆದಿದ್ದಾರೆ. ಅಷ್ಟೇ ಅಲ್ಲದೇ ಬಾಲಕನ ಆಸ್ಪತ್ರೆಯ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸುವ ಮೂಲಕ ಪುನೀತ್ ಮಾನವೀಯತೆ ಮೆರೆದಿದ್ದಾರೆ.

https://twitter.com/PuneethFC17/status/1227420352197746689

ಪುನೀತ್ ಭೇಟಿಯಾಗಿ ಬಾಲಕನ ಕುಟುಂಬದವರ ಜೊತೆ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರ್ಶ್ ಕಷ್ಟಕ್ಕೆ ನೆರವಾದ ಪುನೀತ್‍ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *