‘ಬಿಲ್ ಗೇಟ್ಸ್’ ಆಗ ಹೊರಟವರ ಅವಾಂತರ ನೋಡಿ ನಕ್ಕ ಪ್ರೇಕ್ಷಕ!

Public TV
1 Min Read
Bill Gates A

ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ‘ಬಿಲ್ ಗೇಟ್ಸ್’ ಚಿತ್ರ ಇಂದು ಬಿಡುಗಡೆಯಾಗಿದೆ. ಚಿತ್ರದ ಸ್ಯಾಂಪಲ್‍ಗಳಿಂದ ಗಮನ ಸೆಳೆದಿದ್ದ ಈ ಚಿತ್ರ ಪ್ರೇಕ್ಷಕರನ್ನು ನಕ್ಕು ನಗಿಸುತ್ತಾ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ.

ಬಿಲ್ ಗೇಟ್ಸ್ ನಂತೆ ಆಗರ್ಭ ಶ್ರೀಮಂತನಾಗಬೇಕೆಂದು ಕನಸು ಯಾರು ಕಾಣೋದಿಲ್ಲ ಹೇಳಿ. ಹಾಗೇಯೇ ಕನಸು ಕಂಡ ಹಳ್ಳಿ ಹುಡುಗರೇ ಚಿಕ್ಕಣ್ಣ, ಶಿಶಿರ್. ಬಿಲ್ ಗೇಟ್ಸ್ ನಂತೆ ಆಗರ್ಭ ಶ್ರೀಮಂತರಾಗಬೇಕೆಂದು ಸಿಟಿ ಬಸ್ಸು ಹತ್ತೋ ಹುಡುಗರು ಶ್ರೀಮಂತರಾಗಲು ಏನೆಲ್ಲ ಸರ್ಕಸ್ ಮಾಡ್ತಾರೆ, ಆ ಸರ್ಕಸ್ ನಲ್ಲಿ ಏನೆಲ್ಲ ರಿಸ್ಕ್ ಅನುಭವಿಸುತ್ತಾರೆ ಅನ್ನೋದನ್ನ ಕಾಮಿಡಿ ಮುಖಾಂತರ ಹೇಳ ಹೊರಟಿದ್ದಾರೆ ನಿರ್ದೇಶಕ ಶ್ರೀನಿವಾಸ.

BillGates 1

ನಗುವಿನ ಜೊತೆ ಸಾಮಾಜಿಕ ಮೌಲ್ಯವನ್ನು ಹೇಳೋ ಈ ಚಿತ್ರ ಪ್ರೇಕ್ಷಕರ ಮನಸ್ಸಿಗೆ ಇಷ್ಟವಾಗಿದೆ. ಚಿಕ್ಕಣ್ಣ, ಶಿಶಿರ್ ತರ್ಲೆ, ಪೇಚಾಟಗಳು ತೆರೆ ಮೇಲೆ ನೋಡಲು ಮಜವಾಗಿದೆ. ಇನ್ನು ಕಾಮಿಡಿ ಜೊತೆ ಲವ್ ಕಹಾನಿಯೂ ಚಿತ್ರದಲ್ಲಿದ್ದು ನೋಡುಗರಿಗೆ ಬಿಲ್ ಗೇಟ್ಸ್ ಮನರಂಜನೆಯನ್ನು ನೀಡೋದ್ರಲ್ಲಿ ಮೇಲುಗೈ ಸಾಧಿಸಿದೆ.

ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ ಅಭಿನಯ ಚೆನ್ನಾಗಿ ಮೂಡಿ ಬಂದಿದೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು ನೋಬಿನ್ ಪೌಲ್ ಸಂಗೀತ, ತಿಲಕ್ ಕ್ಯಾಮೆರಾ ವರ್ಕ್ ಗಮನ ಸೆಳೆಯುತ್ತೆ.

BillGates 3

ಚಿತ್ರ: ಬಿಲ್ ಗೇಟ್ಸ್
ನಿರ್ದೇಶನ: ಶ್ರೀನಿವಾಸ
ಸಂಗೀತ: ನೋಬಿಲ್ ಪೌಲ್
ಛಾಯಾಗ್ರಹಣ: ತಿಲಕ್
ತಾರಾಬಳಗ: ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ, ಅಕ್ಷರ ರೆಡ್ಡಿ, ರಶ್ಮಿಕಾ ರೋಜಾ, ಕುರಿ ಪ್ರತಾಪ್, ಇತರರು.

ರೇಟಿಂಗ್: 3.5/5

Share This Article
Leave a Comment

Leave a Reply

Your email address will not be published. Required fields are marked *