ಬೆಂಗಳೂರು: ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕುವೆಂಪು ನಗರದಲ್ಲಿ ನಡೆದಿದೆ.
ಪ್ರಭು ಯಾನೆ ಅಪ್ಪು ಕೊಲೆಯಾದ ಯುವಕ. 25 ವರ್ಷದ ಪ್ರಭು ಸಿದ್ದೇಶ್ವರ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡಿದ್ದ. ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ಕಿರಾತಕರು ಅಟ್ಯಾಕ್ ಮಾಡಿ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಯಾಗಿರುವ ಪ್ರಭು ತಾನು ಮಾಡುವ ಕೆಲಸದೊಂದಿಗೆ ಪೊಲೀಸ್ ಇನ್ಫರ್ಮರ್ ಆಗಿ ಕೆಲಸ ಮಾಡಿಕೊಂಡಿದ್ದ. ಕಮಲ ನಗರ, ಕುವೆಂಪು ನಗರದ ಸುತ್ತಮತ್ತ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ. ಒಂದೆರಡು ಬಾರಿ ದರೋಡೆ ಮಾಡಿದ್ದ ದರೋಡೆಕೊರರ ಬಗ್ಗೆ ಪೊಲೀಸರಿಗೆ ಕೂಡ ಮಾಹಿತಿ ನೀಡಿ ರೆಡ್‍ಹ್ಯಾಂಡ್ ಆಗಿ ಹಿಡಿಸಿದ್ದ ಎನ್ನಲಾಗಿದೆ.
ಕಳ್ಳರ, ದರೋಡೆಕೊರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ವಿಚಾರವೇ ಜೀವಕ್ಕೆ ಸಂಚಾರ ತಂದಿಡ್ತಾ ಅನ್ನೋ ಅನುಮಾನಗಳು ಹುಟ್ಟಿಕೊಂಡಿದೆ. ಘಟನೆ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.