ಬಸ್ ಚಲಾಯಿಸಿದ KSRTC ಎಂಡಿ ಶಿವಯೋಗಿ ಕಳಸದ್

Public TV
1 Min Read
ksrtc md

ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್ ಓಡಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿವಾದಕ್ಕೆ ಸಿಕ್ಕಾಕೊಂಡಿದ್ದರು. ಈ ಬೆನ್ನಲ್ಲೇ ಕಳೆದ ಮೂರು ದಿನಗಳ ಹಿಂದೆ ಬಿಎಂಟಿಸಿ ಎಂಡಿ ಶಿಖಾ ಬಸ್ ಓಡಿಸಿದ್ದರು. ಈಗ ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್ ಬಿಎಂಟಿಸಿ ವೋಲ್ವೋ ಬಸ್ ಚಲಾಯಿಸಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

22 ಸೆಕೆಂಡ್ ಇರುವ ಈ ವೈರಲ್ ವಿಡಿಯೋದಲ್ಲಿ, ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್ ಕಪ್ಪು ಕನ್ನಡಕ ಹಾಕಿಕೊಂಡು ಬಸ್ ಚಲಾಯಿಸಿದ್ದಾರೆ. ಬಸ್ಸಿನಲ್ಲಿದ್ದ ಕೆಲ ಅಧಿಕಾರಿಗಳು ಡ್ರೈವಿಂಗ್ ಬಗ್ಗೆ ಎಂಡಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಶಿವಯೋಗಿ ಕಳಸದ್ ಅವರ ಈ ವಿಡಿಯೋ ವಿವಾದಕ್ಕೆ ಕಾರಣವಾಗಿದೆ.  ಇದನ್ನೂ ಓದಿ: 60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ

ksrtc md 1

ಈ ವಿಡಿಯೋ ನೋಡಿ, ಕೆಲವರು ಸಾರಿಗೆಯ ಯಾವುದೋ ಒಂದು ನಿಗಮದ ಎಂಡಿಗಳಾದರೆ ಸರ್ಕಾರಿ ಬಸ್‍ಗಳನ್ನು ಓಡಿಸಬಹುದಾ? ಇವರನ್ನು ಯಾರು ಪ್ರಶ್ನಿಸುವವರು ಇಲ್ಲವೇ? ಇದೇ ಬಸ್‍ಗಳನ್ನು ಬೇರೆಯವರು ಓಡಿಸಿದರೆ ಕಾನೂನು ಉಲ್ಲಂಘನೆ ಎಂದು ದಂಡ ಹಾಕಲಾಗುತ್ತೆ. ಆದರೆ ಈ ಎಂಡಿಗಳಿಗೆ ದಂಡ ಹಾಕುವವರು ಯಾರು ಬಿಎಂಟಿಸಿಯ ಎಂಡಿ, ಕೆಎಸ್‌ಆರ್‌ಟಿಸಿ ಎಂಡಿ ಬಸ್ ಓಡಿಸಲು ಅವಕಾಶ ಇದೆ ಎಂಬುವುದಾದರೆ ರೇಣುಕಾಚಾರ್ಯ ಬಸ್ ಡ್ರೈವ್ ಮಾಡಿದ್ದು ಕೂಡ ಸರಿನೇ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ವೋಲ್ವೋ ಬಸ್‍ನ ಚಾಲಕಿಯಾದ ಬಿಎಂಟಿಸಿ ಎಂಡಿ ಶಿಖಾ

Share This Article
Leave a Comment

Leave a Reply

Your email address will not be published. Required fields are marked *