ಹೊಸ ಡಿಸಿಎಂ ಹುದ್ದೆ ಸೃಷ್ಟಿ ಇಲ್ಲ-ಕಾರಜೋಳ

Public TV
1 Min Read
bgk govind karjohal

ಕೊಪ್ಪಳ: ಹೊಸ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಇಂತಹ ವಿಚಾರಗಳನ್ನು ನಂಬಬೇಡಿ ಎಂದು ಉಪಮುಖ್ಯಮಂತ್ರಿ ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ಕೊಪ್ಪಳದ ತಾವರಗೇರಾದಲ್ಲಿ ಮಾತನಾಡಿದ ಅವರು, ಹೊಸ ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಯಾವ ಚರ್ಚೆಯೂ ಆಗಿಲ್ಲ. ಇಂತಹ ವಿಚಾರಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ಹೇಳಿದರೆ ಮಾತ್ರ ನಂಬಿ. ಇಂತಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದರು.

Govind Karjol Ashwath Narayan Laxman Savadi

ಸಂಪಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಸಂಕ್ರಮಣ ಮುಗಿದ ಬಳಿಕ ಸಂಪುಟ ಪುನರ್ ರಚನೆ ಆಗುತ್ತದೆ. ಈ ಕುರಿತು ಅನುಮಾನ ಬೇಡ. ಡಿಸಿಎಂ ಹುದ್ದೆ ಕುರಿತು ಶ್ರೀ ರಾಮುಲು ಪೈಪೋಟಿ ನಡೆಸುತ್ತಿರುವ ವಿಚಾರ ನನಗೆ ಗೊತ್ತಿಲ್ಲ. ಅಲ್ಲದೆ ಸಂಪುಟದಲ್ಲಿ ಯಾರು ಇರಬೇಕು, ಯಾರು ಇರ್ತಾರೆ ಎನ್ನುವ ಕುರಿತು ಸಹ ಚರ್ಚೆ ಆಗಿಲ್ಲ. ಹೀಗಾಗಿ ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದು ಅಪ್ರಸ್ತುತ ಎಂದು ಜಾಣತನದ ಉತ್ತರ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *