ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಆಯೋಜಿಸಿದ 10 ದಿನಗಳ ಕಾಲ ನಡೆಯುವ ಕರಾವಳಿ ಉತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು.
ತುಳುನಾಡು-ಹೊರ ಜಿಲ್ಲೆಗಳ ಸಾಂಸ್ಕೃತಿಕ ಕಲಾ ಲೋಕದ ಸಂಗಮದ ಈ ಉತ್ಸವವನ್ನು ತುಳುನಾಡಿನ ಸಂಸ್ಕೃತಿ ಬಿಂಬಿಸುವ ಮುಟ್ಟಾಳೆಯನ್ನು ಅತಿಥಿಗಳಿಗೆ ತೊಡಿಸುವುದರ ಮೂಲಕ ಸ್ವಾಗತ ನೀಡಲಾಯಿತು. ಮಂಗಳೂರಿನ ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ಕರಾವಳಿ ಉತ್ಸವದ ಮೆರವಣಿಗೆಗೆ ನಗರದ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವರ್ಣರಂಜಿತ ಜಾನಪದ-ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.
ತುಳುನಾಡಿನ ಸಂಪ್ರದಾಯದಂತೆ ಅತಿಥಿಗಳಿಗೆ ಮುಟ್ಟಾಳೆ ತೊಡಿಸಿ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು. ಮೆರವಣಿಗೆಯು ನೆಹರೂ ಮೈದಾನದಿಂದ ಆರಂಭಗೊಂಡು ಕೆ.ಎಸ್.ರಾವ್ ರಸ್ತೆ, ನವಭಾರತ್ ವೃತ್ತ, ಪಿವಿಎಸ್, ಲಾಲ್‍ಬಾಗ್ ಮೂಲಕ ಕರಾವಳಿ ಉತ್ಸವ ಮೈದಾನ ತಲುಪಿತು. ಉತ್ಸವದ ಕಲಾ ಸಿರಿವಂತಿಕೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ವಿವಿಧ ಕಲಾ ತಂಡಗಳು ಭಾಗವಹಿಸಿ ಕರಾವಳಿ ಉತ್ಸವ ಮೆರವಣಿಗೆಗೆ ಮೆರುಗು ನೀಡಿದವು.