ಬೆಂಗಳೂರು: ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಂಧ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಬಿ.ಎಸ್.ಎನ್.ರೆಡ್ಡಿ ಅವರು ಜನವರಿ 1ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಹುಟ್ಟಿದ ಹಬ್ಬದ ಸಂಭ್ರವನ್ನು ದೇವಾಲಯ, ಸ್ನೇಹಿತರು, ಕುಟುಂಬದೊಂದಿಗೆ ಆಚರಿಸಿಕೊಳ್ಳುವುದು ಸಾಮಾನ್ಯ. ಆದರೆ ಬಿ.ಎಸ್.ಎನ್.ರೆಡ್ಡಿ ಅಂಧ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಕಳೆದ 30 ವರ್ಷಗಳಿಂದ ತಮ್ಮ ಹುಟ್ಟಿದ ಹಬ್ಬವನ್ನು ಸಾಮಾಜಿಕ ಸೇವಾ ದೃಷ್ಟಿಯಿಂದ ಆಚರಿಸಿಕೊಳ್ಳುತ್ತಿರುವ ಬಿ.ಎಸ್.ಎನ್.ರೆಡ್ಡಿ ಅವರು, ಈ ಬಾರಿಯೂ ಕೂಡ 2 ಸಾವಿರ ಅಂಧ ಮಕ್ಕಳಿಗೆ ಒಂದು ದಿನದ ಊಟವನ್ನು ನೀಡಿ ಹುಟ್ಟಿದ ಹಬ್ಬದ ದಿನವನ್ನು ಸಾರ್ಥಕವಾಗಿ ಆಚರಿಸಿಕೊಂಡಿದ್ದಾರೆ.
ಎಲ್ಲಾ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಸಾಮಾಜಿಕ ಕಳಕಳಿಯಿಂದ ತಮ್ಮ ಹುಟ್ಟಿದ ದಿನವನ್ನು ಆಚರಿಸಿಕೊಂಡರೆ ಸಮಾಜಕ್ಕೆ ಉತ್ತಮ ಸಂದೇಶ ನೀಡದಂತಾಗುತ್ತೆ ಎಂಬುವುದು ಬಿ.ಎಸ್.ಎನ್. ರೆಡ್ಡಿ ಅವರ ಆಶಯವಾಗಿದೆ. ಪ್ರಾಣಿ ಪ್ರಿಯಾರಾಗಿರುವ ಬಿ.ಎಸ್.ಎನ್. ರೆಡ್ಡಿ ಅವರು ಹುಟ್ಟಿದ ದಿನದ ಸಂಭ್ರಮವನ್ನು ಪೊಲೀಸ್ ಡಾಗ್ಸ್ ಜೊತೆಯೂ ಆಚರಿಸಿಕೊಂಡಿದ್ದಾರೆ.