ಬೆಂಗಳೂರು: ಪುಲಿಕೇಶಿ ನಗರದ ಮುತ್ತೂಟ್ ಫೈನಾನ್ಸ್ ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳು ನೇಪಾಳಕ್ಕೆ ಎಸ್ಕೇಪ್ ಆಗಿರುವ ಸಾಧ್ಯತೆ ಇದೆ.
ಸುಮಾರು 9 ಜನರ ಗ್ಯಾಂಗ್ ಟಾಯ್ಲೆಟ್ ನ ಗೋಡೆ ಕೊರೆದು 77 ಕೆ.ಜಿ ಚಿನ್ನ ಕಳವು ಮಾಡಿತ್ತು. ಎಲ್ಲರೂ ನೇಪಾಳ ಮೂಲದವರು ಎನ್ನಲಾಗಿದೆ. ಮುತ್ತೂಟ್ ನಲ್ಲಿರುವ ಚಿನ್ನ ಹೊಡೆದ್ರೆ ಲೈಫ್ ಸೆಟ್ಲ್ ಆಗಬಹುದು ಅಂತ ಜೊತೆಯಲ್ಲಿದ್ದವರಿಗೆ ಗಾರ್ಡ್ ಹುರಿದುಂಬಿಸಿದ್ದನು. ಹೀಗಾಗಿ ತಿಂಗಳ ಹಿಂದೆಯೇ ನಕಲಿ ದಾಖಲೆ ನೀಡಿ, ಬೇರೆ ಬೇರೆಯವರ ಹೆಸರಲ್ಲಿ ಸಿಮ್ ಖರೀದಿ ಮಾಡಲಾಗಿತ್ತು.
ಕದ್ದ ಮಾಲಿನ ಸಮೇತ ರೈಲಿನ ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಕಳ್ಳರು ರಾಜಾರೋಷವಾಗಿ ದೆಹಲಿ ಸೇರಿದ್ದಾರೆ. ಅಲ್ಲಿಂದ ನೇಪಾಳಕ್ಕೆ ಹೋಗಿದ್ದಾರೆ. ದಾರಿ ಮಧ್ಯೆ ಸಿಕ್ಕ ನದಿಗಳಲ್ಲಿ ಬಳಕೆ ಮಾಡಿದ್ದ ಮೊಬೈಲ್ ಮತ್ತು ಸಿಮ್ ಗಳನ್ನ ಎಸೆಯಲಾಗಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಈ ಘಟನೆ ಡಿಸೆಂಬರ್ 24ರಂದು ನಡೆದಿದ್ದರೂ ಚಿನ್ನ ಲೆಕ್ಕ ಹಾಕುವ ನೆಪದಲ್ಲಿ ಮುತ್ತೂಟ್ ಸಿಬ್ಬಂದಿ ಎರಡು ದಿನ ತಡವಾಗಿ ಕಂಪ್ಲೆಂಟ್ ಕೊಟ್ಟಿದ್ದಾರೆ. ಈ ಮಧ್ಯೆ ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಯಾರೋ ಬಂದು ಕೇಳಿದರು ಅಂತ ಸೆಕ್ಯುರಿಟಿ ಗಾರ್ಡ್ ಆಗಿ ನೇಮಿಸಿಕೊಂಡಿದೆ. ಆರೋಪಿಗಳು ಸಿಗೋದು ಲೇಟ್ ಆದಂತೆಲ್ಲ ಅಡ ಇಟ್ಟವರ ಆತಂಕ ಇನ್ನೂ ಹೆಚ್ಚಾಗುತ್ತಿದೆ.