ಹಾವೇರಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪರಮಶಿಷ್ಯರು ಆಗಿದ್ದ ಸ್ವತಂತ್ರ ಸೇನಾನಿ, ಏಕೀಕರಣ ನೇತಾರ, ಶಿಕ್ಷಣ ಪ್ರೇಮಿ, ಹಲವಾರು ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಗುದ್ಲೆಪ್ಪ ಹಳ್ಳಿಕೇರಿಯವರ ಹಿರಿಯ ಪುತ್ರ ಡಾ. ದೀನಬಂಧು ಹಳ್ಳಿಕೇರಿಯವರು ಶನಿವಾರ ರಾತ್ರಿ ವಿಧಿವಶರಾಗಿದ್ದಾರೆ.
79 ವಸಂತಗಳನ್ನು ಪೂರೈಸಿದ್ದ ಹಳ್ಳಿಕೇರಿಯವರು ಧರ್ಮಪತ್ನಿ, ಮೂವರು ಸಹೋದರರು, ಮೂವರು ಸಹೋದರಿಯರು, ಒಬ್ಬ ಪುತ್ರ ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ. ತಂದೆ ಗುದ್ಲೆಪ್ಪ ಹಳ್ಳಿಕೇರಿಯವರ ಹೆಜ್ಜೆಯಲ್ಲಿ ಹೆಜ್ಜೆ ಹಾಕಿದ ಡಾ. ದೀನಬಂಧು ಹಳ್ಳಿಕೇರಿಯವರು ಮಹತ್ಮಾ ಗಾಂಧೀಜಿಯವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸರಳ ಬದುಕು ನಡೆಸುತ್ತಿದ್ದರು.
ಮೃತರ ಅಂತ್ಯ ಸಂಸ್ಕಾರ ಹಾಗೂ ಶೋಕಾಚರಣೆಯನ್ನು ಗಣ್ಯರ ಸಮ್ಮುಖದಲ್ಲಿ ಹೊಸರಿತ್ತಿಯ ಬಡ ಮಕ್ಕಳ ಶಿಕ್ಷಣಕ್ಕಾಗಿ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಮಾಡಲಾಗುತ್ತದೆ. ಬಡಮಕ್ಕಳಿಗೆ ಅನೇಕ ಶಿಕ್ಷಣದ ಸಂಸ್ಥೆಯ ತೆರೆದು ಶಿಕ್ಷಣ ದಾನಿಗಳಾಗಿದ್ದರು.