ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಸುಳ್ವಾಡಿ ಸಂತ್ರಸ್ತೆ

Public TV
1 Min Read
Sulvadi case

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಒಂದು ವರ್ಷದಿಂದ ಅನಾರೋಗ್ಯಕ್ಕೀಡಾಗಿದ್ದ ಹನೂರಿನ ಎಂ.ಜಿ.ದೊಡ್ಡಿ ಮಹಿಳೆ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದಾರೆ.

ಎಂಜಿ ದೊಡ್ಡಿ ಗ್ರಾಮದ ಮಲ್ಲಿಗಾ (50) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷ ಪ್ರಸಾದ ಸೇವಿಸಿ ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮಲ್ಲಿಗಾ ಅವರು ಆಗಾಗ ತಲೆ ಸುತ್ತಿ ಬೀಳುತ್ತಿದ್ದರು. ಶುಕ್ರವಾರ ಮನೆ ಬಳಿ ಮೂರ್ಛೆ ಬಿದ್ದು, ತೀವ್ರ ಪೆಟ್ಟಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

sulvadi

ಕಳೆದ ವರ್ಷ ಸಂಭವಿಸಿದ ಸುಳ್ವಾಡಿ ಮಾರಮ್ಮನ ವಿಷ ಪ್ರಸಾದ ದುರಂತದಲ್ಲಿ 17 ಜನ ಸಾವನ್ನಪ್ಪಿದ್ದು, 120 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಸುಳ್ವಾಡಿ ವಿಷ ಪ್ರಸಾದದ ಎಫೆಕ್ಟ್ ನಿಂದ ವಿಷವುಂಡವರು ಹೊರ ಬರಲಾಗದೆ ಇನ್ನೂ ನೋವು ಅನುಭವಿಸ್ತಿದ್ದಾರೆ. ಸರ್ಕಾರ ಇನ್ನಾದ್ರೂ ಹೆಚ್ಚೆತ್ತು ಸಂತ್ರಸ್ತರ ನೆರವಿಗೆ ಧಾವಿಸಬೇಕಾಗಿದೆ.

Share This Article