ಬೆಂಗಳೂರು: ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಕಂಡಕ್ಟರ್ ಇಂದಿರಾಬಾಯಿ ಮೇಲೆ ಆಸಿಡ್ ಹಾಕಿದ್ದು ಮೈದುನ ಅರುಣ್ ನಾಯಕ್ ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ಅರುಣ್ ನಾಯಕ್ ಪೀಣ್ಯ ಡಿಪೋದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೆ, ಇಂದಿರಾಬಾಯಿ ಶಾಂತಿನಗರ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇಂದಿರಾಬಾಯಿ, ಅರುಣ್ ನಾಯಕ್ ಗೆ ಸಂಬಂಧದಲ್ಲಿ ಅತ್ತಿಗೆ ಆಗಬೇಕು. ಹೀಗಿದ್ದು ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.
ಇತ್ತೀಚೆಗೆ ಇಂದಿರಾಬಾಯಿ ಬೇರೊಂದು ವ್ಯಕ್ತಿಯ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಅರುಣ್ ಕುಮರ್ ಗೆ ತಿಳಿಯಿತು. ಬಳಿಕ ಅರುಣ್ ಈ ವಿಷಯವಾಗಿ ತನ್ನ ಅತ್ತಿಗೆ ಇಂದಿರಾಬಾಯಿ ಜೊತೆ ಜಗಳವಾಡಿದ್ದನು. ಇದೇ ವಿಚಾರಕ್ಕೆ ಕೋಪಗೊಂಡ ಅರುಣ್ ನಾಯಕ್ ಆಸಿಡ್ ದಾಳಿ ನಡೆಸಿದ್ದಾನೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
ಕಳೆದ ಎರಡು ದಿನಗಳ ಹಿಂದೆ ಬಿಎಂಟಿಸಿ ಮಹಿಳಾ ಕಂಡಕ್ಟರ್ ಇಂದಿರಾಬಾಯಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ಎರಚಿ ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೈದುನ ಅರುಣ್ ನಾಯಕ್ ಆತನ ಸ್ನೇಹಿತ ಕುಮಾರ್ ನಾಯಕ್‍ನನ್ನು ಬಂಧಿಸಿದ್ದಾರೆ.