ಚಿಕ್ಕಬಳ್ಳಾಪುರ: ಯಾರಿಗೆ ಪೌರತ್ವ ನೀಡಬೇಕು ಎಂಬುದು ಈಗ ಪೌರತ್ವ ಕಾಯಿದೆಯ ತಿದ್ದುಪಡಿ ನಂತರ ಸರಿಯಾಗಿದೆ. ಇದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾಂಗ್ರೆಸ್, ತಮ್ಮ ರಾಜಕೀಯ ಲಾಭಕ್ಕೆ ಪೌರತ್ವ ಕಾಯಿದೆಯನ್ನ ವಿರೋಧಿಸುತ್ತಿದೆ. ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಅಂತ ಕಾಂಗ್ರೆಸ್ ವಿರುದ್ಧ ಬಿಜೆಪಿಯ ಶಾಸಕ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಪೌರತ್ವ ಕಾಯಿದೆಯಿಂದ ಭಾರತೀಯ ಪ್ರಜೆಗಳಿಗೆ ಯಾವುದೇ ತೊಂದರೆ ಇಲ್ಲ. ಇದರಿಂದ ಯಾವುದೇ ಭಾಷೆ, ಜಾತಿ, ಧರ್ಮದ ಪ್ರಜೆಗಳಿಗೂ ಅನ್ಯಾಯ ಆಗುತ್ತಿಲ್ಲ. ಆದರೆ ಜನರ ಭಾವನೆಗಳನ್ನ ಕೆರಳಿಸಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕಾಂಗ್ರೆಸ್ ಕೆಲಸ ನಾಚಿಕೇಗೇಡಿತನ ಹಾಗೂ ಖಂಡನೀಯ ಎಂದರು.
ಪೌರತ್ವ ಕೋಡೋದು ದೇಶದ ಕರ್ತವ್ಯ ಅದರಲ್ಲಿ ತಪ್ಪೇನಿದೆ? ಪೌರತ್ವ ಕಾಯಿದೆಯ ತಿದ್ದುಪಡಿಯಿಂದ ಸಂವಿಧಾನಕ್ಕೆ ಅಪಚಾರ ಆಗಿಲ್ಲ. ಆದರೆ ಕಾಂಗ್ರಸ್ಸಿಗರು ಸಂವಿಧಾನಕ್ಕೆ ಅಪಚಾರ ಆಗಿದೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ದೇಶಕ್ಕೆ ಕಾಂಗ್ರೆಸ್ ಪಕ್ಷ ಮಾರಕ ಅಂತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಹೀಗಾಗಿ ಇನ್ನಾದ್ರೂ ಕಾಂಗ್ರೆಸ್ ಪಕ್ಷ ನ್ಯಾಯಯುತ ಹೋರಾಟಗಳ ಮೂಲಕ ಜನರ ಮನಸ್ಸು ಗೆಲ್ಲುವ ಕೆಲಸ ಮಾಡಲಿ ಎಂದು ಹೇಳಿದರು.
ನಾನು ಚಿಕ್ಕಬಳ್ಳಾಪುರ ಕ್ಷೇತ್ರದ ಜನೆತೆಯ ಆಶೀರ್ವಾದದಿಂದ ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಸಚಿವ ಸ್ಥಾನ ಕೊಡೋದು, ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರಚನೆ ಮಾಡೋದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅದು ಅವರ ಪರಮೋಚ್ಛ ಅಧಿಕಾರ. ಆದ್ರೆ ಅವಕಾಶ ಕೊಟ್ಟರೆ ರಾಜ್ಯದ ಜನತೆಗೆ ಒಳ್ಳೆಯ ಕೆಲಸ ಮಾಡಬೇಕೇಂಬುದು ನನ್ನ ಆಸೆ ಎಂದರು.
ಸಚಿವ ಸ್ಥಾನಗಳಲ್ಲಿ ಮಹತ್ವದ್ದು, ಕೆಲಸಕ್ಕೆ ಬಾರದ್ದು ಅಂತ ಯಾವುದೂ ಇರಲ್ಲ. ಎಲ್ಲಾ ಖಾತೆಗಳು ಜನಪರವಾಗಿಯೇ ಇರುತ್ತವೆ. ಮುಖ್ಯಮಂತ್ರಿಗಳು ಈಗಾಗಲೇ ನಮಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವುದಾಗಿ ಘೋಷಣೆ ಮಾಡಿದ್ದು ಅವರಿಗೆ ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಸುಧಾಕರ್ ಹೇಳಿದರು.
ಉಪಚುನಾವಣೆಯಲ್ಲಿ ಗೆದ್ದ ನಂತರ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ನರೇಗಾ ಕಾಮಗಾರಿಗಳ ಅನುಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.