ಪಟ್ಟಕ್ಕೆ ತಂದವರು ಅವರೇ – ಪಟ್ಟದಿಂದ ಇಳಿಸೋದು ಅವರೇ

Public TV
1 Min Read
SIDDU MISTRY

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯರ ತಲೆದಂಡ ಸನ್ನಿಹಿತವಾಗಿದ್ದರೂ ಅದರ ನೇತೃತ್ವ ವಹಿಸಿದ ಮಿಸ್ತ್ರಿ ಮಾತ್ರ ಸಿದ್ದರಾಮಯಯ್ಯ ಪಾಲಿಗೆ ಆಪತ್ಭಾಂದವ ಜೊತೆಗೆ ಕಂಟಕವಾಗಿದ್ದಾರೆ.

ಸಮ್ಮಿಶ್ರ ಸರ್ಕಾರದ ಪತನದ ನಂತರ ಸಿದ್ದರಾಮಯ್ಯರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ತರಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಸೋನಿಯ ಗಾಂಧಿಯವರ ನಂಬಿಕೆಯ ಬಂಟ ಮಧುಸೂದನ್ ಮಿಸ್ತ್ರಿ ರಾಜ್ಯಕ್ಕೆ ಬಂದು ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಯಥಾವತ್ ವರದಿ ಹೈಕಮಾಂಡಿಗೆ ನೀಡಿದ್ದರು. ಅದರಂತೆ ಎಐಸಿಸಿ ನಾಯಕಿ ಸೋನಿಯಗಾಂಧಿ ಸಿದ್ದರಾಮಯ್ಯರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಸಿದ್ದರಾಮಯ್ಯರಿಗೆ ವಿಪಕ್ಷ ಹಾಗೂ ಸಿಎಲ್‍ಪಿ ಎರಡು ನಾಯಕತ್ವ ಸಿಗಲು ಮಧುಸೂದನ್ ಮಿಸ್ತ್ರಿಯೇ ಕಾರಣ.

Congress flag 2 e1573529275338

ಇಂದು ಪರ್ಯಾಯ ನಾಯಕತ್ವದ ಆಯ್ಕೆಗೂ ಅದೇ ಮಧುಸೂದನ್ ಮಿಸ್ತ್ರಿ ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ಕೊಡುವ ವರದಿಯ ಮೇಲೆಯೇ ಸಿದ್ದರಾಮಯ್ಯ ತಲೆದಂಡ ನಿರ್ಧಾರವಾಗಲಿದೆ.

ಸಿದ್ದರಾಮಯ್ಯರನ್ನ ಪಟ್ಟಕ್ಕೆ ತಂದ ಕೀರ್ತಿಯು ಮಧುಸೂದನ್ ಮಿಸ್ತ್ರಿಯಾದರೆ ಅವರನ್ನ ಪಟ್ಟದಿಂದ ಇಳಿಸಿ ಬೇರೆಯವರಿಗೆ ನಾಯಕತ್ವ ವಹಿಸಿಕೊಟ್ಟ ಕೀರ್ತಿಯು ಮಧುಸೂದನ್ ಮಿಸ್ತ್ರಿಗೆ ಸಲ್ಲಲಿದೆ.

Share This Article
Leave a Comment

Leave a Reply

Your email address will not be published. Required fields are marked *