ಗದಗ: ಅಂಗನವಾಡಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನೀರಿನ ಟ್ಯಾಂಕ್‍ಗೆ 4 ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕುರುಡಗಿ ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು ದುರಗಪ್ಪ ಮಾದರ (4) ಎಂದು ಗುರುತಿಸಲಾಗಿದೆ. ದುರಗಪ್ಪ ಮಾದರ ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ವೇಳೆ ಅಂಗನವಾಡಿ ಅವರಣದಲ್ಲಿರುವ ನೀರಿನ ಟ್ಯಾಂಕ್ ಒಳಗೆ ಬಿದ್ದಿದ್ದಾನೆ. ಆದರೆ ಇದನ್ನು ಅಂಗನವಾಡಿ ಸಿಬ್ಬಂದಿ ಗಮನಿಸಿಲ್ಲದ ಕಾರಣ ಮೃತಪಟ್ಟಿದ್ದಾನೆ.
ಕುರುಡಗಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿರುವ ಅಂಗನವಾಡಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಗದಗ ಜಿಲ್ಲೆ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.