ಹಾಸನ: ಬೈಕ್ ರಸ್ತೆಯಲ್ಲಿ ನಿಲ್ಲಿಸುವ ವಿಚಾರವಾಗಿ ಯುವಕರ ಗುಂಪು ಹೊಡೆದಾಡಿಕೊಂಡ ಘಟನೆ ಹಾಸನದ ಹೊಳೆನರಸೀಪುರ ದಲ್ಲಿ ನಡೆದಿದೆ.
ಪಟ್ಟಣದ ಸೂರನಹಳ್ಳಿ ಬಳಿ ದರ್ಶನ್ ಮತ್ತು ದಿನೇಶ್ ನಡುವೆ ಬೈಕ್ ನಿಲ್ಲಿಸುವ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಮತ್ತೆ ಅದೇ ಜಗಳ ಮುಂದುವರಿಸಿ ದರ್ಶನ್ ಮತ್ತು ಗಣೇಶ್ ಸೇರಿದಂತೆ ಆರು ಮಂದಿ ಗುಂಪಾಗಿ ದಿನೇಶ್ ಮನೆ ಬಳಿ ತೆರಳಿದ್ದಾರೆ. ಅಲ್ಲದೆ ಮತ್ತೊಂದು ಗುಂಪಿನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕೈಕೈ ಮಿಲಾಯಿಸಿದ್ದಾರೆ.
ಈ ಘಟನೆಯಲ್ಲಿ ದಿನೇಶ್ ಎಂಬವರಿಗೆ ತಲೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಎರಡೂ ಗುಂಪಿನ ಯುವಕರನ್ನು ಕರೆದು ಬುದ್ಧಿ ಹೇಳಿದ ಪೊಲೀಸರು ಜಗಳ ಅಂತ್ಯಗೊಳಿಸಿದ್ದಾರೆ.
ಈ ಸಂಬಂಧ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.