ಅತ್ಯುತ್ತಮ ಬೌಲಿಂಗ್, ಫೀಲ್ಡಿಂಗ್ – 60 ರನ್‍ಗಳಿಗೆ 6 ವಿಕೆಟ್ ಪತನ, ಬಾಂಗ್ಲಾ ಪಂಕ್ಚರ್

Public TV
2 Min Read
rohith sharma catch

ಕೊಲ್ಕತ್ತಾ: ಬಿಸಿಸಿಐ ಅಧ್ಯಕ್ಷರಾಗಿ ತವರು ನೆಲದಲ್ಲಿ ಪಿಂಕ್ ಟೆಸ್ಟ್ ಕ್ರಿಕೆಟ್ ಆಯೋಜಿಸುವ ಮೂಲಕ ಅಧ್ಯಕ್ಷ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಮೊದಲ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟಿಗೆ ಚಾಲನೆ ಸಿಕ್ಕಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಕಾರ್ಯಕ್ರಮಕ್ಕೆ ಆಗಮಿಸಿ ಗಂಟೆ ಬಾರಿಸಿ ಚಾಲನೆ ನೀಡಿದ್ದಾರೆ.

ಶೇಖ್ ಹಸೀನಾ ಅವರಿಗೆ ವಿರಾಟ್ ಕೊಹ್ಲಿ ಅವರನ್ನು ಗಂಗೂಲಿ ಪರಿಚಯಿಸಿದ ನಂತರ ಕೊಹ್ಲಿ ಬಾಂಗ್ಲಾ ಅಧ್ಯಕ್ಷರಿಗೆ ತಂಡ ಎಲ್ಲ ಆಟಗಾರರ ಪರಿಚಯವನ್ನು ಮಾಡಿಕೊಟ್ಟರು. ಟಾಸ್ ಗೆದ್ದ ಬಾಂಗ್ಲಾ ಮೊದಲು ಬ್ಯಾಟಿಂಗ್ ಆರಂಭಿಸಿದ್ದು ಆರಂಭಿಕ ಕುಸಿತ ಕಂಡಿದೆ. ಮೂವರು ಆಟಗಾರರು ಶೂನ್ಯಕ್ಕೆ ಔಟಾಗಿದ್ದು 60 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಉಮೇಶ್ ಯಾದವ್ ಮೂರು ವಿಕೆಟ್ ಕಿತ್ತರೆ ಇಶಾಂತ್ ಶರ್ಮಾ 2, ಮೊಹಮ್ಮದ್ ಶಮಿ 1 ವಿಕೆಟ್ ಪಡೆದಿದ್ದಾರೆ. ಆರಂಭಿಕ ಆಟಗಾರ ಶಾದ್ಮನ್ ಇಸ್ಲಾಂ 29 ರನ್ ಹೊಡೆದರೆ ಉಳಿದ 5 ಆಟಗಾರು ಎರಡಂಕಿಯನ್ನು ದಾಟಲು ವಿಫಲರಾಗಿದ್ದಾರೆ. ಮಹಮುದ್ದಲ್ಲಾ ನೀಡಿದ ಕ್ಯಾಚನ್ನು ರೋಹಿತ್ ಶರ್ಮಾ ಸ್ಲಿಪ್‍ನಲ್ಲಿ ಹಾರಿ ಹಿಡಿದರೆ ಶಾದ್ಮನ್ ಇಸ್ಲಾಂ ಅವರು ವೃದ್ಧಿಮಾನ್ ಸಹಾ ಹಿಡಿದ ಅತ್ಯುತ್ತಮ ಕ್ಯಾಚ್‍ಗೆ ಬಲಿಯಾದರು. ಇದನ್ನೂ ಓದಿ: 7 ರನ್‍ಗೆ ಆಲೌಟ್ – 754 ರನ್‍ಗಳ ಭರ್ಜರಿ ಜಯ ಸಾಧಿಸಿ ದಾಖಲೆ

ಹಲವು ರಾಷ್ಟ್ರಗಳು ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದರೂ ಭಾರತದ ಆಟಗಾರರು ನಿರಾಸಕ್ತಿ ತೋರಿಸಿದ್ದರು. 2016ರ ದುಲೀಪ್ ಟ್ರೋಫಿ ಪಂದ್ಯ ಆಡಿದ್ದ ಚೇತೇಶ್ವರ ಪೂಜಾರ, ಮಯಾಂಕ್ ಅಗರ್ವಾಲ್ ಉತ್ತಮ ಪ್ರತಿಕ್ರಿಯೆ ನೀಡಿರಲಿಲ್ಲ. ಆರಂಭಿಕ 20 ಓವರ್ ಬಳಿಕ ಚೆಂಡಿನ ಗಾತ್ರ ಬದಲಾಗುತ್ತದೆ. ರಾತ್ರಿ ಸರಿಯಾಗಿ ಕಾಣಿಸುವುದಿಲ್ಲ. ಸ್ವಿಂಗ್ ಆಗುವುದಿಲ್ಲ ಎಂದ ದೂರು ಬಂದಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ಹಿಂದೇಟು ಹಾಕಿತ್ತು. ಕಳೆದ ವರ್ಷ ಆಸ್ಟ್ರೇಲಿಯಾ ಕ್ರಿಕೆಟ್ ಹಗಲು ರಾತ್ರಿ ಪಂದ್ಯ ಆಯೋಜಿಸುವಂತೆ ಪ್ರಸ್ತಾಪ ಇಟ್ಟಿತ್ತು. ಆದರೆ ಬಿಸಿಸಿಐ ಒಪ್ಪಿಗೆ ನೀಡಿರಲಿಲ್ಲ.

ಗಂಗೂಲಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ವಿಶೇಷ ಅಸಕ್ತಿ ತೋರಿಸಿದ ಪರಿಣಾಮ ಪಂದ್ಯ ಈಗ ಆಯೋಜನೆಗೊಂಡಿದೆ. ಪ್ರತಿವರ್ಷ ಕೋಲ್ಕತ್ತಾದಲ್ಲಿ ಹಗಲು ರಾತ್ರಿ ಪಂದ್ಯ ಆಯೋಜಿಸಲು ಗಂಗೂಲಿ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

saha

Share This Article
Leave a Comment

Leave a Reply

Your email address will not be published. Required fields are marked *