ಬೆಂಗಳೂರು: ಕಬ್ಬನ್ ಪಾರ್ಕ್‍ನಲ್ಲಿ ಫೋಟೋ ಶೂಟ್‍ಗೆ ಕ್ಯಾಮೆರಾ ತಂದರೆ ಲಕ್ಷಾಂತರ ರೂಪಾಯಿ ಕ್ಯಾಮೆರಾ ಸೀಜ್ ಆಗಲಿದೆ. ಅಲ್ಲದೇ ಜೊತೆಗೆ ಫೋಟೋ ಶೂಟ್ ಮಾಡಿದರೆ ದಂಡ ಕೂಡ ಹಾಕುವ ಹೊಸ ಕಾಯ್ದೆಯನ್ನು ಜಾರಿಗೆ ತರಲು ತೋಟಗಾರಿಕಾ ಇಲಾಖೆ ನಿರ್ಧಾರ ಮಾಡಿದೆ.
ಈಗಾಗಲೇ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ನಲ್ಲಿ ಫೋಟೋ ಶೂಟ್ ನಿಷೇಧಗೊಂಡಿದೆ. ಆದರೂ ಈ ಆದೇಶಕ್ಕೆ ಕ್ಯಾರೇ ಅನ್ನದ ಜನರು, ಪ್ರಿವೆಡ್ಡಿಂಗ್ ಫೋಟೋ ಶೂಟ್ ನಡೆಸುವಾಗ ಎಲ್ಲೆಂದರಲ್ಲಿ ಬಟ್ಟೆ ಬದಲಾಯಿಸುತ್ತಾರೆ. ಇದರಿಂದ ವಾಯುವಿಹಾರಕ್ಕೆ ಬಂದವರಿಗೆ ಇರಿಸುಮುರಿಸು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಾಕಷ್ಟು ಜನರು ಈ ವಿಚಾರವಾಗಿ ಇಲಾಖೆಗೆ ದೂರು ಕೂಡ ನೀಡಿದ್ದಾರೆ. ಜೊತೆಗೆ ಹೈ ರೆಸ್ಯೂಲಷನ್ ಇರುವ ಕ್ಯಾಮೆರಾ ಬಳಕೆಯಿಂದ ಕಬ್ಬನ್ ಪಾರ್ಕಿನ ಪಕ್ಷಿ ಸಂಕುಲಕ್ಕೂ ತೊಂದರೆಯಾಗಲಿದೆ ಎಂದು ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.
ಸದ್ಯವೇ ಫೋಟೋ ಶೂಟ್ ಗೆ ಬಳಸುವ ಕ್ಯಾಮೆರಾಗಳನ್ನು ಸೀಜ್ ಮಾಡಿ ದಂಡ ಕಟ್ಟಿಸಿಕೊಳ್ಳುವ ಕಾಯ್ದೆಯನ್ನು ಪ್ರಯೋಗಿಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ.