ನಟಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಕ್ರಿಕೆಟಿಗ ಕೆ.ಎಲ್ ರಾಹುಲ್

Public TV
1 Min Read
kl rahul

ಮುಂಬೈ: ಭಾರತ ತಂಡದ ಕ್ರಿಕೆಟ್ ಆಟಗಾರ ಕೆ.ಎಲ್ ರಾಹುಲ್ ಬಾಲಿವುಡ್ ನಟಿ, ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಅವರ ಜೊತೆಗಿರುವ ರೊಮ್ಯಾಂಟಿಕ್ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮಂಗಳವಾರ ಅಥಿಯಾ ತಮ್ಮ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಕೆ.ಎಲ್ ರಾಹುಲ್ ಅವರ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ. ರಾಹುಲ್ ಫೋಟೋ ಹಾಕಿ ಅದಕ್ಕೆ, “ಹ್ಯಾಪಿ ಬರ್ತ್ ಡೇ” ಎಂದು ಬರೆದು ಕೋತಿಯ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದರು.

kl rahul athiya shettyu

ಪೋಸ್ಟ್ ಮಾಡಿದ ಫೋಟೋದಲ್ಲಿ ರಾಹುಲ್, ಅಥಿಯಾರನ್ನು ನೋಡುತ್ತಿರುತ್ತಾರೆ. ಅಥಿಯಾ ನಾಚಿಕೊಂಡು ನಗುತ್ತಿರುತ್ತಾರೆ. ಹಲವು ದಿನಗಳಿಂದ ರಾಹುಲ್ ಹಾಗೂ ಅಥಿಯಾ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ಫೋಟೋ ನೋಡಿದ ಮೇಲೆ ನೆಟ್ಟಿಗರ ಕುತೂಹಲ ಹೆಚ್ಚಾಗಿದೆ.

kl rahul and athiya shetty

ಇತ್ತೀಚೆಗೆ ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ರಾಹುಲ್ ಹಾಗೂ ಅಥಿಯಾ ತಮ್ಮ ಸ್ನೇಹಿತರ ಜೊತೆಗೆ ಡಿನ್ನರ್‌ಗೆ ಹೋಗಿದ್ದರು. ಈ ವೇಳೆ ಇಬ್ಬರು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಡಿನ್ನರ್ ಮುಗಿದ ನಂತರ ರಾಹುಲ್ ಹಾಗೂ ಅಥಿಯಾ ಒಂದೇ ಕಾರಿನಲ್ಲಿ ಹೊರಟು ಹೋದರು.

ಅಥಿಯಾ ಶೆಟ್ಟಿ ‘ಹೀರೋ’ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ 2015ರಲ್ಲಿ ರಿಲೀಸ್ ಆಗಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ ನಿರ್ಮಿಸಿದ್ದರು. ಆದರೆ ಈ ಚಿತ್ರ ಅಷ್ಟಾಗಿ ಯಶಸ್ಸು ಕಂಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *