ಬಂಜಾರ ಸಮುದಾಯಕ್ಕೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ: ಸ್ವಾಮೀಜಿ ಆರೋಪ

Public TV
1 Min Read
BIJ BANJARA SOMLINGA SWAMIJI

ವಿಜಯಪುರ: ವ್ಯಕ್ತಿಯೊಬ್ಬ ಬಂಜಾರಾ ಕ್ರಿಸ್ ಮಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ರೇವು ಚವ್ಹಾಣ ಎಂಬಾತ ಬಂಜಾರಾ ಕ್ರಿಸ್ ಮಸ್ ಎಂದು ಪೋಸ್ಟ್ ಹಾಕಿದ್ದಾನೆ. ಈ ವಿಚಾರಕ್ಕೆ ವಿಜಯಪುರ ಬಂಜಾರ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

0211 BIJ BANJARA REVU CHAVAN1

ಕ್ರಿಸ್ ಮಸ್ ಆಚರಣೆ ಕಾರ್ಯಕ್ರಮಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಅದರಲ್ಲಿ ಬಂಜಾರ ಶಬ್ದ ಬಳಸಿದ್ದಕ್ಕೆ ವಿರೋಧ ಮಾಡುತ್ತಿದ್ದೇವೆ. ನಮ್ಮ ಸಮಾಜದ ಮುಗ್ಧ ಜನರನ್ನು ನಮ್ಮ ಸಮಾಜದವರೆ ಆದ ರೇವು ಚವ್ಹಾಣ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಬಂಜಾರ ಸಮಾಜದವರಿಗೆ ಅನೇಕ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುತ್ತಿದ್ದಾರೆ. ಇದನ್ನು ಬಂಜಾರ ಸಮಾಜ ಖಂಡಿಸುತ್ತದೆ. ಅಲ್ಲದೆ ರೇವು ಚವ್ಹಾಣ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ದೂರು ದಾಖಲಿಸುವುದಾಗಿ ಬಂಜಾರ ಸಮಾಜದ ಸೋಮಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *