ಬಾಗ್ದಾದಿ ಹತ್ಯೆ ಬೆನ್ನಲ್ಲೇ ಐಸಿಸ್‍ಗೆ ಹೊಸ ನಾಯಕ ನೇಮಕ

Public TV
1 Min Read
abullah qardash

ವಾಷಿಂಗ್ಟನ್: ಅಬು ಬಕರ್ ಅಲ್ ಬಾಗ್ದಾದಿ ಹತ್ಯೆ ಬೆನ್ನಲ್ಲೇ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಗೆ ನೂತನ ಮುಖ್ಯಸ್ಥನನ್ನು ನೇಮಕ ಮಾಡಲಾಗಿದೆ.

ಐಸಿಸ್‍ಗೆ ನೂತನ ನಾಯಕನಾಗಿ ಅಬ್ದುಲ್ಲಾ ಖಾರ್ಡಾಶ್ ನೇಮಕಕೊಂಡಿದ್ದಾನೆ. ಖಾರ್ಡಾಶ್ ಇರಾಕಿನ ಮಾಜಿ ಅಧ್ಯಕ್ಷ, ಸರ್ವಾಧಿಕಾರಿ ಸದ್ದಾಂ ಹುಸೇನ್ ಸೈನ್ಯದಲ್ಲಿ ಅಧಿಕಾರಿಯಾಗಿದ್ದಾನೆ. ಖಾರ್ಡಾಶ್‍ನನ್ನು ಪ್ರಾಧ್ಯಾಪಕನೆಂದು ಕರೆಯಲಾಗುತ್ತಿದೆ. ಈಗಾಗಲೇ ಅವನು ಐಸಿಸ್‍ನ ದಿನನಿತ್ಯದ ಕಾರ್ಯವನ್ನು ನಿಯಂತ್ರಿಸುತ್ತಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಸುರಂಗದೊಳಗೆ ಅಳುತ್ತಾ ಓಡಿ ಸತ್ತ ಬಾಗ್ದಾದಿ: ನರಹಂತಕನ ಸಾವಿನ ರಹಸ್ಯ

saddam hussein

ಸ್ಥಳೀಯ ಗುಪ್ತಚರ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ ಪ್ರಕಾರ, ಖಾರ್ಡಾಶ್ ಈಗ ಐಸಿಸ್‍ನ ಹೊಸ ಕಿಂಗ್‍ಪಿನ್ ಆಗಲಿದ್ದಾನೆ. ಬಾಗ್ದಾದಿಯ ವಾಯುದಾಳಿಯಲ್ಲಿ ಗಾಯಗೊಂಡ ನಂತರ ಆಗಸ್ಟ್‌ನಲ್ಲಿ ಖಾರ್ಡಾಶ್‍ನನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿತ್ತು. ಆ ಸಮಯದಲ್ಲಿ ಬಾಗ್ದಾದಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ. ಅನಾರೋಗ್ಯದ ಕಾರಣ ಬಾಗ್ದಾದಿ ಕೆಲಸದಲ್ಲಿ ಭಾಗವಹಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಸಿಸ್ ನಾಯಕ ಬಾಗ್ದಾದಿನನ್ನ ನಾಯಿಯಂತೆ ಕೊಂದಿದ್ದೇವೆ: ಟ್ರಂಪ್

ಖಾರ್ಡಾಶ್ ಬಾಗ್ದಾದಿಗೆ ಅತ್ಯಂತ ಆಪ್ತರಾಗಿದ್ದಾನೆಂದು ನಂಬಲಾಗಿದೆ. ಜೊತೆಗೆ 2003ರಲ್ಲಿ ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಇರಾಕ್‍ನ ಬಾಸ್ರಾದಲ್ಲಿರುವ ಜೈಲಿನಲ್ಲಿ ಇಬ್ಬರೂ ಒಟ್ಟಿಗೆ ಇದ್ದರು. ಈ ಹಿಂದೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಬು ಬಕರ್ ಅಲ್-ಬಾಗ್ದಾದಿ ಯುಎಸ್ ಮಿಲಿಟರಿಯಿಂದ ಸುತ್ತುವರಿದ ನಂತರ ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ ಎಂದು ಘೋಷಿಸಿದ್ದರು. ಬಾಗ್ದಾದಿನನ್ನು 2014ರಲ್ಲಿ ಮಸೀದಿಯಲ್ಲಿ ನೋಡಲಾಗಿತ್ತು. ಈ ವೇಳೆ ಭಾಷಣದಲ್ಲಿ ತನ್ನನ್ನು ಇರಾಕ್ ಮತ್ತು ಸಿರಿಯಾದ ಖಲೀಫ್ ಎಂದು ಘೋಷಿಸಿಕೊಂಡಿದ್ದ.

Baghdadi 1

Share This Article
Leave a Comment

Leave a Reply

Your email address will not be published. Required fields are marked *