ಕುರುಬರನ್ನು ಅವಮಾನಿಸಿದ್ರೆ ನನ್ನ ವಂಶ ಸರ್ವನಾಶವಾಗಲಿ: ಸೊಗಡು ಶಿವಣ್ಣ

Public TV
1 Min Read
sogadu shivanna

– ಸಿದ್ದರಾಮಯ್ಯನನ್ನು ದುರ್ಯೋಧನನಿಗೆ ಹೋಲಿಕೆ

ತುಮಕೂರು: ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಜಾತಿ ಟೆರರಿಸ್ಟ್ ಎಂದು ಕರೆದಿದ್ದ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಿಎಂ ವಿರುದ್ಧ ಮತ್ತೇ ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊಗಡು ಶಿವಣ್ಣ, ನಾನು ಸಿದ್ದರಾಮಯ್ಯರನ್ನು ಜಾತಿ ಜಾತಿಗಳ ನಡುವೆ ಒಡಕು ತರುವ ಜಾತಿ ಟೆರರಿಸ್ಟ್ ಎಂದಿದ್ದೇನೆ ಹೊರತು ಕುರುಬ ಸಮುದಾಯವನ್ನ ಅವಮಾನಿಸಿಲ್ಲ. ಹಾಗಿದ್ದರೂ ಕುರುಬರು ನನ್ನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಾನು ಕುರುಬರ ಸಮುದಾಯವನ್ನು ಅವಮಾನಿಸಿದರೆ ನನ್ನ ವಂಶ ಸರ್ವನಾಶವಾಗಲಿ ಎಂದ ಸೊಗಡು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

siddaramaiah 1

ಸಿದ್ದರಾಮಯ್ಯರನ್ನ ಕಾಂಗ್ರೆಸ್ಸಿಗರು ಪರಮೋಚ್ಛ ನಾಯಕ ಅಂತಾರೆ. ಸ್ಪೀಕರನ್ನೇ ಏಕವಚನದಲ್ಲಿ ಸಂಭೋಧಿಸುವ ಸಿದ್ದರಾಮಯ್ಯಗೆನಾದರೂ ಮಾನ ಮರ್ಯಾದೆ ಇದೆಯಾ. ಪ್ರಧಾನಿ ಮೋದಿಯನ್ನು ನರಹಂತಕ ಎಂದು ಕರೆದ ಸಿದ್ದರಾಮಯ್ಯರ ಸಂಸ್ಕೃತಿ ಯಾವ ರೀತಿಯದ್ದು ಎಂದು ನಮಗೆ ಗೊತ್ತಿದೆ. ಮಾತೆತ್ತಿದರೆ ಯಡಿಯೂರಪ್ಪ ಜೈಲಿಗೆ ಹೋಗಿ ಬಂದ ಮುಖ್ಯಮಂತ್ರಿ ಅಂತಾರಲ್ಲ. ಇವರ ಪಕ್ಷದಲ್ಲಿನ ಮನಿ ಟೆರರಿಸ್ಟ್ ಜೈಲಿಗೆ ಹೋಗಿ ಬಂದಿಲ್ವಾ ಎಂದು ಪ್ರಶ್ನಿಸಿದ್ದಾರೆ.

ನೀನು ಕೂಡ ಜೈಲಿಗೆ ಹೋಗುವ ಕಾಲ ಸನ್ನಿಹಿತವಾಗಿದೆ. ಅರ್ಕಾವತಿ ಹಗರಣ ಮಾಡಿಲ್ವಾ. ಲೋಕಾಯುಕ್ತ ಮುಗಿಸಿ ಎಸಿಬಿ ಮಾಡಿಕೊಂಡು ಅರ್ಕಾವತಿ ಹಗರಣದಿಂದ ಬಚಾವ್ ಆಗಿದ್ದಿಯಾ. ಮುಂದೆ ನೀನೂ ಜೈಲಿಗೆ ಹೋಗ್ತಿಯಾ ಎಂದು ಏಕವಚನದಲ್ಲಿಯೇ ಸಿದ್ದುಗೆ ಸೊಗಡು ಟಾಂಗ್ ಕೊಟ್ಟಿದ್ದಾರೆ.

BSY 3 e1571899952660

ಸಿದ್ದರಾಮಯ್ಯ ನಾಯಕರಿಗೆ, ವ್ಯಕ್ತಿಗಳಿಗೆ ಗೌರವ ಕೊಡದೇ ಏನಲೋ ಮಗ, ಏನಲೋ ತಮ್ಮ ಎಂದು ಏಕವಚನದಲ್ಲಿ ಮಾತಾಡೋದರಲ್ಲಿ ಪರಮೋಚ್ಛ. ಅಂಥವರು ನಮ್ಮ ಮುಖ್ಯಮಂತ್ರಿ ಆಗಿದ್ದು ದುರ್ದೈವ ಎಂದು ಗುಡುಗಿದ್ದಾರೆ.

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯರನ್ನು ಮಹಾಭಾರತದ ದುರ್ಯೋಧನನಿಗೆ ಹೋಲಿಸಿದ ಸೊಗಡು ಶಿವಣ್ಣ, ಏಕವಚನದಲ್ಲಿ ಮಾತನಾಡುವ ಸಂಸ್ಕೃತಿ ನಾವು ಸಿದ್ದರಾಮಯ್ಯರಿಂದ ಕಲಿತಿದ್ದೇವೆ. ಕೆಲವೊಮ್ಮೆ ನಾಟಕ ನೋಡುವಾಗ ಭೀಮ, ಅರ್ಜುನನ ಮಾತಿನಂತೆ, ದುರ್ಯೋಧನನ ಮಾತೂ ಪ್ರಭಾವ ಬೀರುತ್ತೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *