Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಉಗ್ರರ ಗುಂಡಿನ ದಾಳಿಗೆ ಸೇನೆಯ ಅಧಿಕಾರಿ ಹುತಾತ್ಮ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಉಗ್ರರ ಗುಂಡಿನ ದಾಳಿಗೆ ಸೇನೆಯ ಅಧಿಕಾರಿ ಹುತಾತ್ಮ

Latest

ಉಗ್ರರ ಗುಂಡಿನ ದಾಳಿಗೆ ಸೇನೆಯ ಅಧಿಕಾರಿ ಹುತಾತ್ಮ

Public TV
Last updated: October 22, 2019 9:00 pm
Public TV
Share
1 Min Read
indian army loc
SHARE

ಶ್ರೀನಗರ: ಉಗ್ರರ ಗುಂಡಿನ ದಾಳಿಗೆ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸಟರ್(ಜೆಸಿಒ) ಹುತಾತ್ಮರಾಗಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಅರ್ಧ ಕಿ.ಮೀ. ದೂರದಲ್ಲಿರುವ ನೌಶೇರಾ ಸೆಕ್ಟರ್‍ನಲ್ಲಿರುವ ಪೋಸ್ಟ್‍ನಲ್ಲಿ ಉಗ್ರರು ಜೆಸಿಒ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿ ನಡೆದ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು, ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಎನ್‍ಐ ವರದಿ ಮಾಡಿದೆ.

J&K: A Junior Commissioned Officer (JCO) of the Indian Army succumbed to injuries after being fired upon by terrorists at a post(500m inside the LoC) in Naushera sector earlier today. Area cordoned off, exchange of fire underway pic.twitter.com/tvEN6Wqc7W

— ANI (@ANI) October 22, 2019

ನಿನ್ನೆಯಷ್ಟೆ ಕಾಶ್ಮೀರದ ಅವಂತಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

ಭಾನುವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಫಿರಂಗಿ ದಾಳಿ ನಡೆಸಿ ನಾಲ್ಕು ಭಯೋತ್ಪಾದಕ ಶಿಬಿರಗಳನ್ನು ಹಾಗೂ ಪಾಕಿಸ್ತಾನ ಸೇನೆಯ ಸ್ಥಾನಗಳನ್ನು ಧ್ವಂಸಗೊಳಿಸಿತ್ತು. ಈ ಘಟನೆ ನಡೆದ ನಂತರ ಕಾಶ್ಮೀರದಲ್ಲಿ ನಡೆದ ಮೊದಲ ಗುಂಡಿನ ಚಕಮಕಿ ಇದಾಗಿದೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಫಿರಂಗಿ ದಾಳಿ ನಡೆಸಿತ್ತು.

#WATCH Jammu and Kashmir: 3 terrorists killed in encounter between security forces & terrorists in Awantipora today. Arms & ammunition recovered. Identities and affiliations being ascertained. Search in the area continues. pic.twitter.com/xMWn0Vl9Fl

— ANI (@ANI) October 22, 2019

ಅಕ್ಟೋಬರ್ 20ರಂದು ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ನೀಲಂ ಕಣಿವೆಯಲ್ಲಿ ನಾಲ್ಕು ಭಯೋತ್ಪಾದಕರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು. ಇದರಿಂದಾಗಿ ಸಾವು-ನೋವು ಹಾಗೂ ಅಪಾರ ಹಾನಿ ಸಂಭವಿಸಿತ್ತು.

ಭಾರತೀಯ ಸೇನೆ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಫಿರಂಗಿ ಬಳಸಿ ದಾಳಿ ನಡೆಸಿತ್ತು. ಸೇನೆ ನಡೆಸಿದ ದಾಳಿಯಿಂದಾಗಿ ಪಿಒಕೆಯಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಸೇನೆಯು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿತ್ತು.

indian army

ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ಧರ್ ಸೆಕ್ಟರ್ ನಲ್ಲಿ ಭಾನುವಾರ ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸಿತ್ತು. ಇದರಿಂದಾಗಿ ಇಬ್ಬರು ಭಾರತೀಯ ಸೈನಿಕರು ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದರು. ಈ ಘಟನೆ ನಂತರ ಭಾರತೀಯ ಸೇನೆ ಉಗ್ರರ ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು.

TAGGED:encounterindiaindian armyJammu and KashmirofficerpakistanPublic TVಅಧಿಕಾರಿಎನ್‍ಕೌಂಟರ್ಜಮ್ಮು ಕಾಶ್ಮೀರಪಬ್ಲಿಕ್ ಟಿವಿಪಾಕಿಸ್ತಾನಭಾರತಭಾರತೀಯ ಸೇನೆ
Share This Article
Facebook Whatsapp Whatsapp Telegram

Cinema news

bigg boss hindi
ಬಿಗ್‌ ಬಾಸ್ ಈ ವಾರ ಫಿನಾಲೆ; ಕ್ಯೂರಿಯಾಸಿಟಿ ಹೆಚ್ಚಿಸಿದ ಗೆಲ್ಲೋರ ಪಟ್ಟಿ
Cinema Latest Top Stories TV Shows
yash 4
ರಾಕಿಂಗ್‌ ಸ್ಟಾರ್‌ ಯಶ್ ಈಗ ಶೋಧಿತ ವ್ಯಕ್ತಿ – ದಾಖಲೆಗಳು ವಶಕ್ಕೆ
Cinema Latest Main Post Sandalwood
Rachita Ram
ಸೀರೆಯಲ್ಲಿ ಬೊಂಬೆಯಂತೆ ಮಿಂಚಿದ ರಚ್ಚು!
Cinema Latest Sandalwood South cinema Top Stories
Sholay The Final Cut
ಶೋಲೆಗೆ 50ರ ಸಂಭ್ರಮ – ಪ್ರೇಕ್ಷಕರ ಮುಂದೆ 4Kಯಲ್ಲಿ ಬರಲಿದೆ ರಿಯಲ್‌ ಕ್ಲೈಮ್ಯಾಕ್ಸ್‌!
Bollywood Cinema Latest Top Stories

You Might Also Like

Parappana agrahara
Bengaluru City

ಸಿಗರೇಟ್‌ ಪ್ಯಾಕ್‌, ಮಾದಕ ವಸ್ತು ಪತ್ತೆ – ಪರಪ್ಪನ ಅಗ್ರಹಾರ ಜೈಲು ವಾರ್ಡರ್ ಅರೆಸ್ಟ್

Public TV
By Public TV
27 minutes ago
Donald Trump 1 1
Latest

ಪುಟಿನ್‌ಗೆ ಭಾರತದಲ್ಲಿ ಭವ್ಯ ಸ್ವಾಗತ – ಟ್ರಂಪ್‌ಗೆ ನೊಬೆಲ್‌ ಸಿಗಬೇಕು: ಪೆಂಟಗನ್‌ ನಿವೃತ್ತ ಅಧಿಕಾರಿ ವ್ಯಂಗ್ಯ

Public TV
By Public TV
29 minutes ago
Indian Railways rajdhani express
Bengaluru City

ಇಂಡಿಗೋ ಸಮಸ್ಯೆ| ಬೆಂಗಳೂರಿನಿಂದ ಹೊರಡುವ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ

Public TV
By Public TV
1 hour ago
Chikkaballapura 2
Chikkaballapur

ಪ್ರೀತಿಯ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ – ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಮರ್ಡರ್!

Public TV
By Public TV
1 hour ago
Good news for Silk Road passengers Double decker flyover to open to traffic on another side in January 2
Bengaluru City

ಸಿಲ್ಕ್ ಬೋರ್ಡ್ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಶೀಘ್ರದಲ್ಲೇ ಕಡಿಮೆಯಾಗಲಿದೆ ಟ್ರಾಫಿಕ್ ಬಿಸಿ

Public TV
By Public TV
2 hours ago
Indigo 6
Bengaluru City

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ – 5ನೇ ದಿನವೂ ಪ್ರಯಾಣಿಕರ ಪರದಾಟ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?