ಚಿತ್ರರಂಗ ಖಾನ್‍ಗಳದ್ದಲ್ಲ- ಮೋದಿ ವಿರುದ್ಧ ಜಗ್ಗೇಶ್ ಗರಂ

Public TV
2 Min Read
collage modi jaggesh

ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗವನ್ನು ಕಡೆಗಣಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನವರಸ ನಾಯಕ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮೋದಿ ಅವರು ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನದ ಅಂಗವಾಗಿ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ಚಿತ್ರರಂಗದವರ ಸಹಕಾರ ಬೇಕು ಎಂದು ಬಾಲಿವುಡ್ ಮಂದಿಯ ಜೊತೆ ಸಂವಾದ ಕಾರ್ಯಕ್ರಮ ನಡೆಸಿದ್ದರು. ಈಗ ಈ ವಿಚಾರದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ಕಡೆಗಣಿಸಿದ ಮೋದಿ ವಿರುದ್ಧ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಈ ವಿಚಾರದಲ್ಲಿ ಇಂದು ಬೆಳಗ್ಗೆ ಎರಡು ಟ್ವೀಟ್ ಮಾಡಿರುವ ಜಗ್ಗೇಶ್, ಕನ್ನಡಿಗರು ಇಂದು ಬಹುತೇಕ ಪರಭಾಷೆಗಳ ಸ್ಟಾರ್ ಗಳಿಗೆ ಚಪ್ಪಾಳೆ ಹೊಡೆದ ತಪ್ಪಿಗೆ ನಾವು ಕನ್ನಡಿಗರು ದಾರಿತಪ್ಪಿದವರಂತೆ ಆಗಿದ್ದೇವೆ. ನರೇಂದ್ರ ಮೋದಿ ಜೀ ಉತ್ತರ ಭಾರತದ ನಟ-ನಟಿಯರಿಗಿಂತ ನಾವು ಯಾವುದರಲ್ಲೂ ಕಮ್ಮಿ ಇಲ್ಲ. ಕಲಾರಂಗಕ್ಕೆ ಶಾರೂಖ್, ಅಮೀರ್ ಒಡೆಯರಲ್ಲ. ನಮ್ಮ ಕನ್ನಡದ ಕಲಿಗಳು ಅನೇಕರಿದ್ದಾರೆ. ನಿಮ್ಮ ಭಾವನೆ ಗೌರವಿಸುತ್ತೇನೆ ಜೈಹಿಂದ್ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಗಾಂಧೀಜಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಬಾಲಿವುಡ್ ಮಂದಿಗೆ ಮೋದಿ ಮಣೆ

ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಅವರು, ಇಂದು ಕರ್ನಾಟಕದಲ್ಲಿ ಹೆಚ್ಚು ತೆರಿಗೆ ಸಂಗ್ರಹ ಕನ್ನಡದ ನೆಲ ಚಿತ್ರರಂಗದಿಂದ ನಟರಿಂದ ಆಗುತ್ತಿದೆ ನೆನಪಿಡಿ. ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಃ ಹಿಂದಿ ಚಿತ್ರರಂಗದಿಂದ ಅಲ್ಲ. ರಾಷ್ಟ್ರಕ್ಕೆ ಈ ವಿಷಯ ಮನವರಿಕೆ ಮಾಡುವ ಕನ್ನಡ ಮನಸ್ಸುಗಳು ಇಲ್ಲವೆ ಎಂದು ಪ್ರಶ್ನಿಸಿದ್ದಾರೆ. ತುಂಬಾ ದುಃಖವಾಯಿತು ಖಾನ್ ಗಳಲ್ಲ ಚಿತ್ರರಂಗ ಎಂದು ಟ್ವೀಟ್ ಮಾಡಿದ್ದಾರೆ.

https://www.instagram.com/p/B3z0Yy6FWV4/?utm_source=ig_embed&utm_campaign=dlfix

ಕೇವಲ ಬಾಲಿವುಡ್ ನಟ-ನಟಿಯರ ಜೊತೆ ಸಂವಾದ ನಡೆಸಿದ್ದಕ್ಕೆ ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆ, ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಕೂಡ ಬೇಸರ ವ್ಯಕ್ತಪಡಿಸಿದ್ದರು. ”ಪ್ರೀತಿಯ ನರೇಂದ್ರ ಮೋದಿಜೀ ನಾವು ದಕ್ಷಿಣ ಭಾರತದವರು. ನಿಮ್ಮನ್ನು ನಾವು ಪ್ರಧಾನಿಯನ್ನಾಗಿ ಪಡೆದಿದ್ದಕ್ಕಾಗಿ ಹೆಮ್ಮೆ ಪಡುತ್ತೇವೆ. ಪ್ರಮುಖ ಮತ್ತು ಸಾಂಸ್ಕೃತಿಕ ವ್ಯಕ್ತಿಗಳು ಬರೀ ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವೇ. ದಕ್ಷಿಣ ಭಾರತವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಇಲ್ಲಿ ನನ್ನ ಭಾವನೆಗಳನ್ನು ಮಾತ್ರ ನೋವಿನಿಂದ ವ್ಯಕಪಡಿಸುತ್ತಿದ್ದೇನೆ. ಹೀಗಾಗಿ ನೀವು ನನ್ನ ಅಭಿಪ್ರಾಯವನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಲಿದ್ದೀರಿ ಎಂದು ಭಾವಿಸುತ್ತೇನೆ” ಎಂದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.

upasana 1

Share This Article
Leave a Comment

Leave a Reply

Your email address will not be published. Required fields are marked *