-ಮಹಾರಾಷ್ಟ್ರಕ್ಕೆ ನೀರು ಬಿಡಲು ಸಾಧ್ಯವಿಲ್ಲ
ಸಾಂಗ್ಲಿ(ಮಹಾರಾಷ್ಟ್ರ): ಮಹಾರಾಷ್ಟ್ರಕ್ಕೆ ನೀರು ಬಿಡಲು ಸಾಧ್ಯವಿಲ್ಲ, ಅಸಾಧ್ಯವಾದ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ. ಬಿಎಸ್‍ವೈ ಸುಳ್ಳು ಭರವಸೆ ನೀಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.’
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯನವರು, ಮಹಾರಾಷ್ಟ್ರಕ್ಕೆ ನೀರು ಬಿಡುವುದು ಸಾಧ್ಯವಿಲ್ಲ, ಅಸಾಧ್ಯವಾದ ಭರವಸೆಯನ್ನ ಯಡಿಯೂರಪ್ಪ ನೀಡಿದ್ದಾರೆ. ಯಡಿಯೂರಪ್ಪನವರ ಭರವಸೆಗಳು ಸುಳ್ಳುಗಳಾಗಿರುತ್ತವೆ. ಕರ್ನಾಟಕದಲ್ಲೇ ಯಡಿಯೂರಪ್ಪ ತಾವು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಇನ್ನು ಮಹಾರಾಷ್ಟ್ರದ ಸಮಸ್ಯೆಗೆ ಯಡಿಯೂರಪ್ಪ ಹೇಗೆ ಸ್ಪಂದಿಸುವರು ಎಂದು ಹರಿಹಾಯ್ದಿದ್ದಾರೆ.
ಬಿಜೆಪಿಯವರು ಎಂದೂ ನಿಜ ಹೇಳಿಲ್ಲ, ಬಿಜೆಪಿ ಪಕ್ಷದವರು ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಕುಡಿಯುವ ನೀರು ಮೊದಲ ಆದ್ಯತೆ, ತಮಿಳುನಾಡಿಗೂ ನಾವು ನೀರು ಕೊಡುತ್ತಿದ್ದೇವೆ. ಆದರೆ ಯಡಿಯೂರಪ್ಪನವರ ಭರವಸೆಗಳೆಲ್ಲ ಸುಳ್ಳು. ಅವರು ಈಡೇರಿಸುವುದಿಲ್ಲ, ಅವರೆಂದೂ ನಿಜ ಹೇಳುವುದಿಲ್ಲ. ಬರೀ ಸುಳ್ಳು ಹೇಳುತ್ತಾರೆ, ಚುನಾವಣೆ ದೃಷ್ಟಿಯಿಂದ ಈ ರೀತಿ ಹೇಳಿದ್ದಾರೆ. ಅವರು ಯಾವುದೇ ಭರವಸೆಗಳನ್ನು ಈಡೇರಿಸುವುದಿಲ್ಲ ಎಂದರು.
ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಉಪ ಚುನಾವಣೆ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲೇ ಕರ್ನಾಟದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸ್ಟ್ರಾಂಗ್ ಆಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿಯೂ ಸಹ ವೋಟ್ ಶೇರಿಂಗ್‍ನಲ್ಲಿ ನಾವೇ ಹೆಚ್ಚು ಮತ ಗಳಿಸಿದ್ದೆವು. ಆದರೆ ಸ್ಥಾನಗಳನ್ನು ಅವರು ಹೆಚ್ಚು ಪಡೆದಿದ್ದರು ಎಂದು ವಿವರಿಸಿದರು.