ಸೈನಿಕರಿಂದ ಗರ್ಬಾ ಡ್ಯಾನ್ಸ್ – ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರಿಂದ ಮನವಿ

Public TV
1 Min Read
soldier dance

ವರಾತ್ರಿಗೆ ಗಡಿಯಲ್ಲಿ ಸೈನಿಕರು ಗರ್ಬಾ ಡ್ಯಾನ್ಸ್ ಮಾಡಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಲ್ಲದೆ ಮಹೀಂದ್ರ ಮೋಟಾರ್ ಮಾಲೀಕ ಆನಂದ್ ಮಹೀಂದ್ರಾ ಅವರು ಕೂಡ ಈ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿಕೊಂಡಿದ್ದು, ನೆಟ್ಟಿಗರು ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರಿನಲ್ಲಿ, “ಡಾಂಡಿಯಾ ಡ್ಯಾಡ್ ಸ್ಪರ್ಧೆಗೆ ನನಗೆ ಯಾವುದೇ ಎಂಟ್ರಿ ಸಿಗಲಿಲ್ಲ. ಆದರೆ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸುನಾಮಿ ತರಿಸುವಂತಿದೆ. ಅದರಲ್ಲಿ ಈ ವಿಡಿಯೋ ಕೂಡ ಒಂದಾಗಿದ್ದು, ನಾನು ಸೆಲ್ಯೂಟ್ ಮಾಡುತ್ತೇನೆ. ಈ ವಿಡಿಯೋ ನೋಡಿ ನನಗೆ ಈಗ ‘ಹೌ ಈಸ್ ದಿ ಜೋಶ್’ ಎಂದು ಕೇಳುವ ಅವಶ್ಯಕತೆ ಇಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

soldier dance 1

ವಿಡಿಯೋದಲ್ಲಿ 13 ಸೈನಿಕರು ಟೋಲಿ ಗುಜರಾತಿ ಹಾಡಿಗೆ ಗರ್ಬಾ ಡ್ಯಾನ್ಸ್(ಗುಜರಾತಿ ಶೈಲಿಯ ನೃತ್ಯ) ಮಾಡಿದ್ದಾರೆ. ಈ ವಿಡಿಯೋವನ್ನು ಮೊದಲು ದೀಪ್ತಿ ಚಾರೋಲ್ಕರ್ ಎಂಬವರು ಟ್ವೀಟ್ ಮಾಡಿಕೊಂಡಿದ್ದರು. ಬಳಿಕ ಆನಂದ್ ಅವರು ಈ ಟ್ವೀಟ್‍ಗೆ ರೀ-ಟ್ವೀಟ್ ಮಾಡಿದ್ದಾರೆ. ಆನಂದ್ ಅವರು ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ವಿಡಿಯೋಗೆ ಸಾವಿರ ಲೈಕ್ಸ್ ಹಾಗೂ ಕಮೆಂಟ್‍ಗಳು ಬಂದಿದೆ.

ಅಲ್ಲದೆ ಆನಂದ್, ದೀಪ್ತಿ ಅವರಿಗೆ ಟ್ವೀಟ್ ಮಾಡುವ ಮೂಲಕ ಸೈನಿಕರು ನೃತ್ಯ ಮಾಡಿದ ಸ್ಥಳದ ಹೆಸರನ್ನು ಕೇಳಿದ್ದಾರೆ. ಈ ವೇಳೆ ನೆಟ್ಟಿಗರು ಸೈನಿಕರು ಇರುವ ಸ್ಥಳದ ಬಗ್ಗೆ ಪ್ರಶ್ನಿಸಬೇಡಿ. ಏಕೆಂದರೆ ಸೈನಿಕರು ಇರುವ ಸ್ಥಳದ ಹೆಸರನ್ನು ಹೇಳಿದರೆ ಅವರಿಗೆ ತೊಂದರೆ ಆಗುವ ಸಾಧ್ಯತೆ ಇದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಬಳಿಕ ದೀಪ್ತಿ ಅವರು ರಿಪ್ಲೈ ಮಾಡುವ ಮೂಲಕ ನನಗೆ ಈ ವಿಡಿಯೋ ವಾಟ್ಸಾಪ್‍ನಲ್ಲಿ ಕಳುಹಿಸಲಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

garba1

Share This Article
Leave a Comment

Leave a Reply

Your email address will not be published. Required fields are marked *