ಬೀದರ್: ಒಂದೆಡೆ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಜನರು ಕಂಗಾಲಾಗಿದ್ದರೆ, ಇತ್ತ ಕಾಂಗ್ರೆಸ್ ಮುಖಂಡ, ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಭರ್ಜರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಶನಿವಾರ ಖೇಣಿ ತಮ್ಮ ಹುಟ್ಟೂರು ಬೀದರ್ ತಾಲೂಕಿನ ಖೇಣಿ ರಂಜೋಳದಲ್ಲಿ ತಮ್ಮ ಬರ್ತ್ ಡೇಯನ್ನು ಆಚರಣೆ ಮಾಡಿಕೊಂಡರು. ಈ ವೇಳೆ ಬೆಂಬಲಿಗರು 100ರೂ. ನೋಟುಗಳಿಂದ ಖೇಣಿಯವರ ದೃಷ್ಟಿ ತೆಗೆದು ಜನರಿಗೆ ಹಂಚಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ವಿಡಿಯೋದಲ್ಲಿ ಕೂಡ ಅಶೋಕ್ ಖೇಣಿಯನ್ನ ನಿಲ್ಲಿಸಿಕೊಂಡು ದುಡ್ಡಿನಿಂದ ದೃಷ್ಟಿ ತೆಗೆದಿರೋದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಮೂಲಗಳ ಪ್ರಕಾರ ದುಡ್ಡನ್ನು ತೂರಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಒಂದು ಕಡೆ ನೆರೆ ಸಂತ್ರಸ್ತರು ತುತ್ತು ಅನ್ನಕ್ಕೆ ಪರದಾಡುತ್ತಿದ್ದರೆ, ಇತ್ತ ಖೇಣಿ ಹುಟ್ಟು ಹಬ್ಬದ ಆಚರಣೆಗೆ ನಡು ಬೀದಿಯಲ್ಲೇ ಹಣದಿಂದ ದೃಷ್ಟಿ ತೆಗೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.