ಶ್ರೀರಾಮುಲು ಸಿಎಂ ಆಗಬೇಕು: ರಘುಪತಿ ಭಟ್

Public TV
1 Min Read
UPD B. Sriramulu A

ಉಡುಪಿ: ಆರೋಗ್ಯ ಸಚಿವ ಶ್ರೀರಾಮುಲು ರಾಜ್ಯ ಮುಖ್ಯಮಂತ್ರಿಯಾಗಬೇಕು ಎಂದು ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ನಗರಲ್ಲಿ ನಡೆದ ಉದ್ಯಮಿ ಜಿ.ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಶ್ರೀರಾಮುಲು ಅವರು ಉಡುಪಿಗೆ ಬರುವಾಗ ಆರೋಗ್ಯ ಸಚಿವರಾಗಿದ್ದರು. ಪ್ರವಾಸ ಮುಗಿಸಿ ಉಡುಪಿಯಿಂದ ಹೋಗುವಾಗ ಸಮಾಜಕಲ್ಯಾಣ ಇಲಾಖೆ ಜವಾಬ್ದಾರಿ ಸಿಕ್ಕಿದೆ. ಸಚಿವರು ಬಡವರ ಕಷ್ಟ ಅರ್ಥ ಮಾಡಿಕೊಳ್ಳುವ ಮನೋಭಾವದವರು. ರಾಮುಲು ಮುಂದೆ ಡಿಸಿಎಂ ಆಗಬೇಕು, ಶ್ರೀ ರಾಮುಲು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಸಿಎಂ ಆಗುವ ಯೋಗ ಶ್ರೀರಾಮುಲು ಅವರಿಗೆ ಬರಬೇಕು ಎಂದು ಹೇಳಿದರು. ಇದನ್ನೂ ಓದಿ: ನೀನೊಬ್ಬ ನಕಲಿ, ಢೋಂಗಿ ಹೋರಾಟಗಾರ- ಭೀಮಾಶಂಕರ್ ಪಾಟೀಲ್‍ಗೆ ಕಟೀಲ್ ಆಪ್ತನಿಂದ ಎಚ್ಚರಿಕೆ

Raghupati Bhat

ಬಡವರ ಬಗ್ಗೆ ಕಾಳಜಿ ಇರುವವರಿಗೆ ಅಧಿಕಾರ ಸಿಗಬೇಕು. ಬಿ.ಎಸ್.ಯಡಿಯೂರಪ್ಪನವರು ಸಿಎಂ ಬೇಡ ಎಂದು ಹೇಳುತ್ತಿಲ್ಲ. ಮಾಧ್ಯಮಗಳು ನನ್ನನ್ನು ತಪ್ಪಾಗಿ ಅರ್ಥೈಸಬೇಡಿ. ಈ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿ ಇರಲಿ. ಶ್ರೀರಾಮುಲು ಅವರಿಗೆ ಇನ್ನೂ ಸಾಕಷ್ಟು ಆಯಸ್ಸು ಇದೆ. ಮುಂದೆ ಅವರಿಗೆ ಸಿಎಂ ಆಗುವ ಅವಕಾಶ ಸಿಗಲಿದೆ. ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಈ ಬಗ್ಗೆ ಪ್ರಾರ್ಥಿಸುತ್ತೇನೆ ಎಂದರು.

ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶ್ರೀರಾಮುಲು ಅವರು, ನಾವ್ಯಾರೂ ಮಂತ್ರಿ ಆಗ್ತೇವೆ ಅಂತ ತಿಳ್ಕೊಂಡೇ ಇರಲಿಲ್ಲ. ಹಿರಿಯರ ಆಶೀರ್ವಾದದಿಂದ ನಾವೆಲ್ಲಾ ಮಂತ್ರಿಗಳಾಗಿದ್ದೇವೆ. ಸಿಕ್ಕಿದ್ರಲ್ಲೇ ನಾವು ಸಮಾಧಾನ ಆಗ್ಬೇಕು. ಮನುಷ್ಯನಿಗೆ ಆಸೆಗಳು ಇರೋದು ಸಹಜ. ಇದ್ದಿದ್ರಲ್ಲೇ ಅಡ್ಜಸ್ಟ್ ಮೆಂಟ್ ಮಾಡ್ಕೊಂಡು ಜನರಿಗೆ ಸಹಾಯ ಮಾಡಿ ಎಂದು ಶ್ರೀರಾಮುಲು ಕಿವಿಮಾತು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *