ದೇಶದ ಅತಿ ದೊಡ್ಡ ಜೆಟ್ಟಿ ಸಮರ್ಪಣೆ – ಎಷ್ಟು ಉದ್ದವಿದೆ? ವಿಶೇಷತೆ ಏನು?

Public TV
2 Min Read
dry dock B

ಮುಂಬೈ: ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ, ಬೃಹತ್ ಗಾತ್ರದ ನೌಕಾ ಜೆಟ್ಟಿಯನ್ನು (ಡ್ರೈ ಡಾಕ್) ಕೇಂದ್ರ ರಕ್ಷಣಾ ಸಚಿವ ಸಚಿವ ರಾಜನಾಥ್ ಸಿಂಗ್ ದೇಶಕ್ಕೆ ಸಮರ್ಪಿಸಿದ್ದಾರೆ.

ಭಾರತೀಯ ನೌಕಾಪಡೆಯ ದಾಳಿ ಘಟಕವಾದ ಮುಂಬೈನಲ್ಲಿರುವ ಪಶ್ಚಿಮ ನೌಕಾ ಕಮಾಂಡ್‍ಗೆ ಇಂತಹ ಜೆಟ್ಟಿಯ ಬಹುಕಾಲದಿಂದ ಇತ್ತು. ಸದ್ಯ ಉದ್ಘಾಟನೆಗೊಂಡ ಜೆಟ್ಟಿಯು ಅನೇಕ ವಿಶೇಷತೆಗಳಿಂದ ಕೂಡಿದೆ. ಈ ಮೂಲಕ ನೌಕಾ ಪಡೆಗೆ ಮತ್ತಷ್ಟು ಬಲ ಬಂದಂತಾಗಿದೆ.

ದೇಶದಲ್ಲಿ ಈಗಾಗಲೇ ವಿಶಾಖಪಟ್ಟಣಂ ಮತ್ತು ಮುಂಬೈ ಜೆಟ್ಟಿ ಸೌಲಭ್ಯವನ್ನು ಹೊಂದಿವೆ. ಇತ್ತ ಕಾರವಾರ ನೌಕಾ ದಳದಲ್ಲಿ ಹಡಗು ಎತ್ತುವ ಸೌಲಭ್ಯ ಇದೆ. ಆದರೆ ಯುದ್ಧ ವಿಮಾನಗಳನ್ನು ಹೊತ್ತು ಸಾಗುವ ಹಡುಗಗಳ ದುರಸ್ತಿಗೆ ಸರಿಯಾದ ಜೆಟ್ಟಿಯೇ ಇರಲಿಲ್ಲ. ಈ ಕೊರತಯನ್ನು ಮುಂಬೈನಲ್ಲಿ ನಿರ್ಮಾಣವಾಗಿರುವ ನೂತನ ಜೆಟ್ಟಿ ತುಂಬಲಿದೆ.

ನೌಕಾಪಡೆಯ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಒಣ ಜೆಟ್ಟಿ (ಡ್ರೈ ಡಾಕ್) ನಿರ್ಮಾಣ ಸೇರಿದಂತೆ ಡಾಕ್ ಯಾರ್ಡ್ ಅನ್ನು ಉನ್ನತೀಕರಣಗೊಳಿಸುವ ಚಿಂತನೆ ನಡೆದಿತ್ತು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ನಿಗಮವು (ಎನ್‍ಐಡಿಸಿ) ಸಮಗ್ರ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಹಿಂದೂಸ್ತಾನ್ ಕನ್‍ಸ್ಟ್ರಕ್ಷನ್ ಕಂಪನಿ (ಎಚ್‍ಸಿಸಿ) ಈ ಜೆಟ್ಟಿಯನ್ನು ನಿರ್ಮಿಸಿದೆ.

ಜೆಟ್ಟಿ ವಿಶೇಷತೆಗಳೇನು?:
ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಜೆಟ್ಟಿಯನ್ನು 1,320 ಕೋಟಿ ರೂ ವೆಚ್ಚದಲ್ಲಿ ಒಂದು ದಶಕದ ಅವಧಿಯೊಳಗೆ ನಿರ್ಮಿಸಲಾಗಿದೆ. ಜೆಟ್ಟಿಯು ಮೂರೂ ಕಡೆ ಸಮುದ್ರದಿಂದ ಆವೃತವಾಗಿದೆ. ಈ ಮಾದರಿಯಲ್ಲಿ ನಿರ್ಮಾಣಗೊಂಡ ದೇಶದ ಏಕೈಕ ಜೆಟ್ಟಿ ಇದಾಗಿದೆ.

ಸಾಮರ್ಥ್ಯದ ವಿಚಾರಕ್ಕೆ ಬಂದರೆ ಬೃಹತ್ ಗಾತ್ರದ ಎರಡು ಹಡಗುಗಳನ್ನು ಏಕಕಾದಲ್ಲಿ ನಿಲ್ಲಿಸಬದುದು. ಜೆಟ್ಟಿಯು 281 ಮೀ ಉದ್ದ, 42 ಮೀ ಅಗಲ ಮತ್ತು 16.7 ಆಳವನ್ನು ಹೊಂದಿದೆ. ಏಕಕಾಲದಲ್ಲಿ ಎರಡು ಜಲಾತಂರ್ಗಾಮಿ ನೌಕೆಗಳನ್ನು ನಿಲ್ಲಿಸಬಹುದು. ಅಷ್ಟೇ ಅಲ್ಲದೆ ಯುದ್ಧ ವಿಮಾನಗಳನ್ನು ಹೊತ್ತು ಸಾಗಿಸಬಲ್ಲ, ರಷ್ಯಾ ನಿರ್ಮಿತ ಐಎನ್‍ಎಸ್ ವಿಕ್ರಮಾದಿತ್ಯ ಹಡಗು ಹಾಗೂ ಕೊಚ್ಚಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಕ್ರಾಂತ್ ಹಡಗುಗಳನ್ನು ಒಟ್ಟಾಗಿ ನಿಲ್ಲಿಸಬಹುದು.

Jetty

ಸಮುದ್ರದಲ್ಲಿ ನಿರ್ಮಿಸಿರುವ, 5,600 ಮೀ. ಉದ್ದದ ಮುಂಬೈಯ ಬಾಂದ್ರಾವರ್ಲಿ ಸೀಲಿಂಕ್ ಸೇತುವೆಗೆ ಬಳಸಿದ ಸಿಮೆಂಟ್‍ಗಿಂತ ಮೂರು ಪಟ್ಟು ಹೆಚ್ಚು ಸಿಮೆಂಟ್ ಅನ್ನು ಬಾಂಬೆ ಜೆಟ್ಟಿ ನಿರ್ಮಾಣಕ್ಕೆ ಬಳಸಲಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆಗೆ ಬಳಕೆಯಾದಷ್ಟು ಪ್ರಮಾಣದ ಉಕ್ಕಿನಿಂದ ಎರಡು `ಐಫೆಲ್ ಟವರ್’ಗಳನ್ನು ನಿರ್ಮಿಸಬಹುದು. ಒಲಿಂಪಿಕ್ ಗಾತ್ರದ 20 ಈಜುಕೊಳಗಳಲ್ಲಿ ಹಿಡಿಸಬಹದಾದಷ್ಟು ನೀರನ್ನು ಈ ಜೆಟ್ಟಿಯಲ್ಲಿ ಸಂಗ್ರಹಿಸಬಹುದು.

ಜೆಟ್ಟಿಯ ಮೂರು ಕಡೆ ನೀರು ಇದೆ. ಹೀಗಾಗಿ ಹಡಗು ಒಳಗೆ ಬಂದಾಗ ಜೆಟ್ಟಿಯೊಳಗಿನ ನೀರು ಹೊರ ಹಾಕಬೇಕು. ಆಗ ದುರಸ್ತಿ ಕಾರ್ಯ ಸರಳವಾಗುತ್ತದೆ. ಹೀಗಾಗಿ ನೂತನ ಜೆಟ್ಟಿಯ ಒಳಗಿನ ನೀರನ್ನು ಖಾಲಿಮಾಡಲು ಅಳವಡಿಸಿರುವ ಭಾರೀ ಸಾಮರ್ಥ್ಯದ ಪಂಪ್‍ಗಳನ್ನು ಅಳವಡಿಸಲಾಗಿದೆ. ಈ ಪಂಪ್‍ಗಳು ಮೂರು ಸೆಕೆಂಡ್‍ಗೆ 10,000 ಘನ ಮೀಟರ್ ನೀರನ್ನು ಹೊರಹಾಕಬಲ್ಲವು. ಇಂತಹ ಎಂಟು ಪಂಪ್‍ಗಳು ಜೆಟ್ಟಿಯ ನೀರನ್ನು ಎರಡೂವರೆ ಗಂಟೆಗಳಲ್ಲಿ ಖಾಲಿ ಮಾಡಬಲ್ಲವು ಎನ್ನಲಾಗಿದೆ.

1732ರಲ್ಲಿ ಸ್ಥಾಪನೆಗೊಂಡ ಬಾಂಬೆ ಡಾಕ್‍ಯಾರ್ಡ್, 18 ಮತ್ತು 19ನೇ ಶತಮಾನಗಳಲ್ಲಿ ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ ಹಡಗುಗಳನ್ನು ನಿರ್ಮಾಣ ಮಾಡುವುದಕ್ಕೆ ಹೆಸರಾಗಿತ್ತು. 1750-65ರಲ್ಲಿ ಬಾಂಬೆ ಒಣ ಜೆಟ್ಟಿಯನ್ನು (ಡ್ರೈ ಡಾಕ್) ನಿರ್ಮಿಸಲಾಗಿತ್ತು. ಹಂತ ಹಂತವಾಗಿ ಬೆಳೆದಂತೆ 1807-10ರ ಅವಧಿಯಲ್ಲಿ ಡಂಕನ್ ಒಣ ಜೆಟ್ಟಿ ನಿರ್ಮಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *