‘ಕೈ’ ಬಿಟ್ಟು ‘ಕಮಲ’ ಹಿಡಿಯಲು ಅನಿಲ್ ಲಾಡ್ ಸಿದ್ಧ?

Public TV
1 Min Read
Anil Lad

ಬಳ್ಳಾರಿ: ಮಾಜಿ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಬಿಜೆಪಿ ಸೇರಲು ಚಿಂತನೆ ನಡೆಸಿದ್ದಾರೆ. ಈ ಕುರಿತು ತಮ್ಮ ಕಾರ್ಯಕರ್ತರಿಗೆ ಮೆಸೇಜ್ ಕಳುಹಿಸಿ ಅನಿಲ್ ಲಾಡ್ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದ್ದಾರೆ.

ಬಳ್ಳಾರಿ ಬ್ರೂಸ್ ಪೇಟರ್ ಬ್ಲಾಕ್ ಕಾಂಗ್ರೆಸ್ ಎಂಬ ವಾಟ್ಸಪ್ ಗ್ರೂಪ್ ಗೆ ಅನಿಲ್ ಲಾಡ್ ಸಂದೇಶ ಕಳುಹಿಸಿ ಕಾರ್ಯಕರ್ತರ ಅಭಿಪ್ರಾಯ ಕೇಳಿದ್ದಾರೆ. ಹಲೋ ಗೆಳೆಯರೇ, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ಕುರಿತು ಚಿಂತಿಸುತ್ತಿದ್ದೇನೆ. ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ ಎಂಬ ಸಂದೇಶ ಕಳುಹಿಸಿದ್ದಾರೆ. ಬಹುತೇಕ ಕಾರ್ಯಕರ್ತರು ಬಿಜೆಪಿ ಸೇರೋದು ಬೇಡ ಎಂದ್ರೆ ಬಳ್ಳಾರಿಯ ಹಿತದೃಷ್ಟಿಯಿಂದ ಸೇರಬಹುದು. ಆಯ್ಕೆಗಳು ನಿಮ್ಮ ಮುಂದಿವೆ ಎಂದು ಪ್ರತಿಕ್ರಿಯಿಸಿದ್ದಾರೆ. ಅನಿಲ್ ಲಾಡ್ ಅವರದ್ದು ಎನ್ನಲಾದ ಸಂದೇಶದ ಸ್ಕ್ರೀನ್ ಶಾಟ್ ಗಳು ಬಳ್ಳಾರಿ ಕೈ ಅಂಗಳದಲ್ಲಿ ಮಿಂಚಿನಂತೆ ಹರಿದಾಡುತ್ತಿವೆ.

ಅಕ್ಟೋಬರ್ 6ರಂದು ಅನಿಲ್ ಲಾಡ್ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದ್ದು, ಇದೂವರೆಗೂ ಮಾಜಿ ಶಾಸಕರು ಅಧಿಕೃತವಾಗಿ ವಿಷಯವನ್ನು ತಿಳಿಸಿಲ್ಲ. ಹೊಸಪೇಟೆಯ ಅನರ್ಹ ಶಾಸಕ ಆನಂದ್ ಸಿಂಗ್ ಮೂಲಕ ಸ್ಥಳೀಯ ಕೈ ಶಾಸಕರನ್ನು ಸೆಳೆಯಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *