ಆಧಾರ್ ಕಾರ್ಡಿಗೆ ಗುಡ್‍ಬೈ? – ಬಹು ಉಪಯೋಗಿ ಕಾರ್ಡಿನತ್ತ ಕೇಂದ್ರದ ಚಿತ್ತ

Public TV
1 Min Read
amit shah 1

ನವದೆಹಲಿ: ಆಧಾರ್ ಕಾರ್ಡಿಗೆ ಗುಡ್‍ಬೈ ಹೇಳಲು ಕೇಂದ್ರ ಸರ್ಕಾರ ಮುಂದಾಗಿದ್ಯಾ ಹೀಗೊಂದು ಪ್ರಶ್ನೆ ಎದ್ದಿದೆ. ಗೃಹ ಸಚಿವ ಅಮಿತ್ ಶಾ ಅವರು ಹೇಳಿದ ಒಂದು ಹೇಳಿಕೆಯಿಂದ ಈ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.

ದೆಹಲಿಯಲ್ಲಿ ಜನಗಣನ(ಜನಗಣತಿ) ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅಮಿತ್ ಶಾ, ದೇಶದ ಜನರ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ಗಳ ಜಾಗದಲ್ಲಿ ಒಂದೇ ಕಾರ್ಡ್ ಇದ್ದರೆ ಬಹಳ ಸಹಾಯವಾಗುತ್ತದೆ. ಬಹು ಉಪಯೋಗಿ ಕಾರ್ಡ್(ಮಲ್ಟಿ ಪರ್ಪಸ್ ಕಾರ್ಡ್) ಇದ್ದರೆ ದೇಶದ ಹಲವು ಸಮಸ್ಯೆಗಳು ಶೀಘ್ರವೇ ಇತ್ಯರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಮ್ಮ ಭಾಷಣದಲ್ಲಿ ಮಲ್ಟಿ ಪರ್ಪಸ್ ಕಾರ್ಡ್ ಇದ್ದರೆ ಚೆನ್ನಾಗಿರುತಿತ್ತು ಎಂದು ಹೇಳಿದರು. ಆದರೆ ಈ ಕಾರ್ಡ್ ಸರ್ಕಾರ ನೀಡಲು ಮುಂದಾಗಿದ್ಯಾ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ವೇಳೆ 2021ರ ಜನಗಣತಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯಲಿದೆ ಎಂದು ತಿಳಿಸಿದರು.

2021ರ ಸೆನ್ಸಸ್ ಗೆ ಒಂದು ಮೊಬೈಲ್ ಅಪ್ಲಿಕೇಶನ್ ಬಳಕೆಯಾಗಲಿದೆ. ಇಲ್ಲಿಯವರೆಗೆ ನಡೆಯುತ್ತಿದ್ದ ಪೇಪರ್ ಸಮೀಕ್ಷೆಯನ್ನು ಈ ಅಪ್ಲಿಕೇಶನ್ ಡಿಜಿಟಲ್ ಸಮೀಕ್ಷೆಯನ್ನಾಗಿ ಪರಿವರ್ತನೆ ಮಾಡಲಿದೆ ಎಂದು ಹೇಳಿದರು.

ಜನಗಣತಿಯ ಸಂಬಂಧಿಸಿದಂತೆ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರ ಒಟ್ಟು 16 ಭಾಷೆಗಳಲ್ಲಿ ಮಾಹಿತಿ ನೀಡಲು ಮುಂದಾಗುತ್ತದೆ. ಒಟ್ಟು 12 ಸಾವಿರ ರೂ. ವೆಚ್ಚದಲ್ಲಿ ಈ ಸಮೀಕ್ಷೆ ನಡೆಸಲು ಸರ್ಕಾರ ಮುಂದಾಗುತ್ತಿದೆ.

ಪ್ರತಿ 10 ವರ್ಷಕ್ಕೊಮ್ಮೆ ದೇಶದಲ್ಲಿ ಜನಗಣತಿ ನಡೆಯುತ್ತದೆ. 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಿತ್ತು. ಪೇಪರ್ ಸಮೀಕ್ಷೆ ಮಾಡಿದ ನಂತರ ಮತ್ತೊಮ್ಮೆ ಅದನ್ನು ಕಂಪ್ಯೂಟರಿಗೆ ದಾಖಲಿಸಿ ಮತ್ತೆ ಲೆಕ್ಕಾಚಾರ ಮಾಡಬೇಕಾಗಿತ್ತು. ಈಗ ಮೊದಲ ಹಂತದಲ್ಲೇ ಡೇಟಾ ಸರ್ವರ್ ಗೆ ದಾಖಲಾಗುವುದರಿಂದ ಸಮಯ ಉಳಿತಾಯವಾಗುವುದರ ಜೊತೆ ಲೆಕ್ಕಾಚಾರವು ಸುಲಭವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *