ನಮೋ ಹುಟ್ಟುಹಬ್ಬಕ್ಕೆ ಹನುಮನಿಗೆ 1.25 ಕೆಜಿ ತೂಕದ ಚಿನ್ನದ ಕಿರೀಟ ನೀಡಿದ ಅಭಿಮಾನಿ

Public TV
2 Min Read
gold crown modi

ಲಕ್ನೋ: ಪ್ರಧಾನಿ ನರೇಂದ್ರ ಮೋದಿ 69ನೇ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ವಾರಣಾಸಿಯ ಸಂಕಟ ಮೋಚನ ದೇಗುಲದ ಹನುಮನಿಗೆ ಬರೋಬ್ಬರಿ 1.25 ಕೆಜಿ ತೂಕದ ಚಿನ್ನದ ಕಿರೀಟ ಕೊಟ್ಟು ಮೋದಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದಾರೆ.

ವಾರಣಾಸಿ ನಿವಾಸಿ ಅರವಿಂದ್ ಸಿಂಗ್ ಅವರು ಮೋದಿ ಅವರ ಕಟ್ಟಾ ಅಭಿಮಾನಿ. ಆದ್ದರಿಂದ ಮೋದಿ ಅವರು ವಾರಣಾಸಿಯಿಂದ ಲೋಕಸಭಾ ಚುನಾವಣೆಗೆ ನಿಂತಾಗ ಗೆಲ್ಲಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದರು. ಅಲ್ಲದೆ ಮೋದಿ ಅವರ ಜೊತೆ ಬಿಜೆಪಿ ಕೂಡ ಗೆದ್ದು, ಎರಡನೇ ಬಾರಿ ಅವರು ಪ್ರಧಾನಿ ಆಗಬೇಕು ಎಂದು ದೇವರಲ್ಲಿ ಬೇಡಿಕೊಂಡಿದ್ದರು. ಅಲ್ಲದೆ ಮೋದಿ ಅವರು ಎರಡನೇ ಬಾರಿ ಗೆದ್ದು, ಪ್ರಧಾನಿ ಪಟ್ಟ ಏರಿದರೆ ಬರೋಬ್ಬರಿ 1.25 ಕೆಜಿ ತೂಕದ ಚಿನ್ನದ ಕಿರೀಟ ಮಾಡಿಸಿ ಹನುಮನಿಗೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದರು. ಇದನ್ನೂ ಓದಿ:ಸ್ಪಚ್ಛತಾ ಅಭಿಯಾನ ನಡೆಸಿ ‘ನಮೋ’ಗೆ ಶುಭಕೋರಿದ ಈಶ್ವರಪ್ಪ

ಅಭಿಮಾನಿ ಆಸೆಯಂತೆ ಮೋದಿ ಅವರು ಚುನಾವಣೆಯಲ್ಲಿ ಜಯಭೇರಿ ಭಾರಿಸಿ, ಎರಡನೇ ಬಾರಿ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದರು. ಆದ್ದರಿಂದ ಮೋದಿ ಅವರ ಹುಟ್ಟುಹಬ್ಬದ ಹಿಂದಿನ ದಿನ ತಮ್ಮ ಹರಕೆ ತೀರಿಸಲು ಅರವಿಂದ್ ನಿರ್ಧರಿಸಿದ್ದರು. ಅದರಂತೆ ಸೋಮವಾರ ಸಂಕಟ ಮೋಚನ ದೇಗುಲಕ್ಕೆ ಬಂದು ಹನುಮನಿಗೆ ಚಿನ್ನದ ಕಿರೀಟ ಸಮರ್ಪಿಸಿದ್ದಾರೆ. ಈ ಮೂಲಕ ಮೋದಿ ಅವರಿಗೆ ಶುಭವಾಗಲಿ, ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಅಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ:ಚಾಮುಂಡಿ ಬೆಟ್ಟದಲ್ಲಿ ಮೋದಿ, ಯಡಿಯೂರಪ್ಪ, ಬಿಜೆಪಿ ಹೆಸರಿನಲ್ಲಿ ಜಿಟಿಡಿ ಅರ್ಚನೆ

ಈ ಬಗ್ಗೆ ಮಾತನಾಡಿ ಖುಷಿಯನ್ನು ಹಂಚಿಕೊಂಡ ಅರವಿಂದ್ ಅವರು, ಮೋದಿ ಅವರಿಗಾಗಿ ಹರಕೆ ಕಟ್ಟಿಕೊಂಡಿದ್ದೆ. ಅದನ್ನು ದೇವರು ನೆರವೇರಿಸಿದ್ದಾನೆ. ಆದ್ದರಿಂದ ದೇವರಿಗೆ ಚಿನ್ನದ ಕಿರೀಟ ಕೊಟ್ಟಿದ್ದೇನೆ ಎಂದರು. ಕಳೆದ 75 ವರ್ಷದಲ್ಲಿ ಭಾರತ ಕಾಣದ ಅಭಿವೃದ್ಧಿಯನ್ನು ಮೋದಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ್ದಾರೆ, ಮಾಡುತ್ತಿದ್ದಾರೆ. ಆದ್ದರಿಂದ ಮೋದಿ ಅವರ ಹುಟ್ಟುಹಬ್ಬದ ಹಿಂದಿನ ದಿನ ದೇವರಿಗೆ ಚಿನ್ನದ ಕಿರೀಟ ನೀಡಲು ನಿರ್ಧರಿಸಿದೆ. ಚಿನ್ನದಂತೆ ಮೋದಿ ಹಾಗೂ ಭಾರತದ ಭವಿಷ್ಯ ಹೊಳೆಯಲಿ. ಇದು ಕಾಶಿ ಜನತೆಯ ಪರವಾಗಿ ನಾನು ಮೋದಿ ಅವರಿಗೆ ನೀಡುತ್ತಿರುವ ಉಡುಗೊರೆ ಎಂದು ಹೇಳಿದ್ದಾರೆ.

pm modi

ಸೋಮವಾರ ತಡರಾತ್ರಿಯೇ ಮೋದಿ ಅವರು ಅಹಮದಾಬಾದ್‍ಗೆ ಆಗಮಿಸಿದ್ದರು. ಗುಜರಾತ್ ರಾಜ್ಯಪಾಲ ಆಚಾರ್ಯ ದೇವರಾತ್ ಹಾಗೂ ಅಲ್ಲಿನ ಸಿಎಂ ವಿಜಯ್ ರೂಪಾನಿ ಅವರು ಪ್ರಧಾನಿ ಅವರನ್ನು ವಿಮಾನ ನಿಲ್ದಾಣದಲ್ಲಿ ಭರಮಾಡಿಕೊಂಡರು. ಮೋದಿ ಅವರು ಇಂದು ಹುಟ್ಟುಹಬ್ಬದ ಪ್ರಯುಕ್ತ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಜೊತೆಗೆ ನರ್ಮದಾ ನದಿಯ ಯೋಜನೆ ಕಾರ್ಯಕ್ರಮಗಳನ್ನು ಪರಿಶೀಲಿಸಲಿದ್ದಾರೆ.

ನಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಬಿಜೆಪಿ ನಾಯಕರು ಹಾಗೂ ಅಭಿಮಾನಿಗಳು ಸಡಗರ ಸಂಭ್ರಮದಿಂದ ದೇಶದೆಲ್ಲೆಡೆ ಆಚರಿಸುತ್ತಿದ್ದಾರೆ. ನಮೋ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ‘ಸೇವಾ ಸಂಪ್ತಾಹ’ ಕಾರ್ಯಕ್ರಮವನ್ನು ಸೆ. 14 ರಿಂದ 20ರವರೆಗೆ ಆಯೋಜಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಹಲವು ಸಾಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *