ತುಮಕೂರು: ತಲೆ ಕೆಟ್ಟ ಯಡಿಯೂರಪ್ಪಗೆ ಅರಳು ಮರಳಾಗಿದೆ. ಅಲ್ಲೆಲ್ಲೋ ಗುಜರಾತ್‍ನಲ್ಲಿ ಟ್ರಾಫಿಕ್ ಹಳೆ ರೂಲ್ಸ್ ಫಾಲೋ ಮಾಡಿದ್ದಾರೆ ಎಂದು ಇಲ್ಲೂ ಮಾಡೋಕೆ ಹೊರಟಿದ್ದಾರೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರಿ ಹೊಸ ನಿಯಮ ಜಾರಿಯಾಗಬೇಕು. ಹೊಸ ನಿಯಮಕ್ಕೆ ವಿನಾಯತಿ ಕೊಡಬಾರದು. ಹೊರದೇಶದಲ್ಲಿ ಅಪಘಾತ ಆದರೆ ಅತಿ ಹೆಚ್ಚು ದಂಡ ಹಾಕುತ್ತಾರೆ. ಎರಡು ಬಾರಿ ಅಪಘಾತ ಮಾಡಿದರೆ 6 ತಿಂಗಳು ಜೈಲಿಗೆ ಹಾಕುತ್ತಾರೆ. ಮೂರು ಬಾರಿ ಅಪಘಾತ ಮಾಡಿದೆ ಮೂರು ವರ್ಷ ಜೈಲು, ಲೈಸನ್ಸ್ ರದ್ದು ಮಾಡುತ್ತಾರೆ. ಹಾಗಾಗಿ ಅಲ್ಲಿನ ವಾಹನ ಸವಾರರಿಗೆ ಭಯ ಇರುತ್ತದೆ ಎಂದರು.
ನಮ್ಮ ದೇಶದಲ್ಲೂ ಹೊಸ ದಂಡ ಜಾರಿಯಾದರೆ ಭಯ ಹುಟ್ಟಿ ನಿಯಮ ಉಲ್ಲಂಘನೆ ಕಡಿಮೆಯಾಗುತಿತ್ತು. ಹೊಸ ರೂಲ್ಸ್ ಹಾಗೇ ಇದ್ದರೆ ಜನರು ದೇಶದ ಕಾನೂನಿಗೆ ಬೆಲೆ ನೀಡುತ್ತಾರೆ. ಕಾನೂನು ಪಾಲನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳೋರು. ಹೊಸ ನಿಯಮ ಹಾಗೆಯೇ ಜಾರಿಯಾಗಬೇಕು, ಪರಿಷ್ಕರಣೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.