ದೂರು ನೀಡಲು ಬಂದ ಮಹಿಳೆಯ ಫೋನ್ ನಂ. ಪಡೆದು ಇನ್ಸ್‌ಪೆಕ್ಟರ್ ಕಿರುಕುಳ

Public TV
1 Min Read
BNG POLICE a

ಬೆಂಗಳೂರು: ನಗರದ ನಿವಾಸಿಯಾಗಿರುವ ಮಹಿಳೆಯೊಬ್ಬರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದು, ಈ ವೇಳೆ ಮಹಿಳೆಯ ಮೊಬೈಲ್ ನಂಬರ್ ಪಡೆದ ಪೊಲೀಸ್ ಇನ್ಸ್ ಪೆಕ್ಟರ್ ಆಕೆಗೆ ಕಿರುಕುಳ ನೀಡಿರುವ ಘಟನೆ ನಗರದ ಬಾಣಸವಾಡಿಯಲ್ಲಿ ನಡೆದಿದೆ.

ಮಹಿಳೆಯ ನಂಬರ್ ಪಡೆದ ಇನ್ಸ್ ಪೆಕ್ಟರ್  ಮಿಸ್ ಕಾಲ್ ಸಮೇತ 8 ಸಂದೇಶಗಳನ್ನು ರವಾನಿಸಿದ್ದಾರೆ. ಈ ಬಗ್ಗೆ ದೂರು ನೀಡಲು ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಮೊರೆ ಹೋದರು ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ದೂರು ದಾಖಲಿಸಲು ನಿರಾಕರಿಸಿ ಮೊಬೈಲ್ ನಂಬರ್ ಬದಲಾಯಿಸುವಂತೆ ಸಲಹೆ ನೀಡಿದ್ದರು ಎಂದು ಮಹಿಳೆ ಮಾವ ತಿಳಿಸಿದ್ದಾರೆ.

BNG POLICE

ಜುಲೈ 18 ರಂದು ಮಹಿಳೆ ಪತಿಯ ವಿರುದ್ಧ ದೂರು ನೀಡಲು ಬಾಣಸವಾಡಿ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಪೊಲೀಸ್ ಅಧಿಕಾರಿ ಅಂಜನೇಯ ಅವರು ಮಹಿಳೆಯನ್ನು ಭೇಟಿ ಮಾಡಿದ್ದರು. ಆ ಬಳಿಕ ಆಗಸ್ಟ್ 11 ರಿಂದ ಮೊಬೈಲ್‍ನಲ್ಲಿ ಸಂದೇಶ ಕಳುಹಿಸಲು ಆರಂಭಿಸಿದ್ದರು. ‘ಹೆಲೋ’ ಮೂಲಕ ಆರಂಭವಾದ ಸಂದೇಶಗಳು ನಿರಂತರವಾಗಿ ಬರುತ್ತಿತ್ತು. ಆದರೆ ಈ ಸಂದೇಶಗಳಿಗೆ ಮಹಿಳೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ವರದಿಯಾಗಿದೆ.

ಮಹಿಳೆಯಿಂದ ಯಾವುದೇ ಪ್ರತಿಕ್ರಿಯೆಬಾರದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ವಾಟ್ಸಾಪ್ ಫೋನ್ ಕರೆ ಕೂಡ ಮಾಡಿದ್ದರು. ಇದಕ್ಕೂ ಮಹಿಳೆ ಪ್ರತಿಕ್ರಿಯೆ ನೀಡಿರಲಿಲ್ಲ. ಪೊಲೀಸ್ ಇನ್ಸ್‌ಪೆಕ್ಟರ್ ಕಿರುಕುಳದಿಂದ ಬೇಸತ್ತ ಮಹಿಳೆ ಕುಟುಂಬಸ್ಥರ ಸಹಾಯ ಪಡೆದು ಅಂತಿಮವಾಗಿ ಸೈಬರ್ ಪೊಲೀಸರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ದೂರು ರವಾನಿಸಿದ್ದಾರೆ. ಇದಕ್ಕೂ ಮುನ್ನ ಪೊಲೀಸ್ ಅಧಿಕಾರಿಗೆ ಮಹಿಳೆಯ ಮಾವ ಕರೆ ಮಾಡಿ ಸಂದೇಶ ಕಳುಹಿಸುತ್ತಿರುವ ಬಗ್ಗೆ ಪ್ರಶ್ನಿಸಿದ್ದು, ಇದರಿಂದ ಜಾರಿಕೊಳ್ಳಲು ಯತ್ನಿಸಿದ ಆತ ತಾನು ಬಾಲಾಜಿ ಬಾರ್ ಅಂಡರ್ ರೆಸ್ಟೋರೆಂಟ್ ವ್ಯಕ್ತಿಯಾಗಿದ್ದು, ಯಾರೋ ನನ್ನ ಮೊಬೈಲ್‍ನಿಂದ ಮೇಸೆಜ್ ಮಾಡಿದ್ದಾರೆ ಎಂದು ಜಾರಿಕೊಂಡಿದ್ದಾಗಿ ತಿಳಿಸಿದ್ದಾರೆ.

banaswadi police station 2

Share This Article
Leave a Comment

Leave a Reply

Your email address will not be published. Required fields are marked *