ಅಭಿಮಾನಿಗಳಲ್ಲಿ ನಟಿ ರಾಖಿ ಸಾವಂತ್ ವಿಭಿನ್ನ ಮನವಿ

Public TV
2 Min Read
rakhi sawant 1

ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಖಿ ಸಾವಂತ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಖಿ ಅವರು ತಮ್ಮ ‘ಚಪ್ಪನ್ ಚೂರಿ’ ಹಾಡನ್ನು ಹಿಟ್ ಮಾಡುವಂತೆ ಅಭಿಮಾನಿಗಳಲ್ಲಿ ವಿಭಿನ್ನವಾಗಿ ಮನವಿ ಮಾಡಿಕೊಂಡಿದ್ದಾರೆ.

ರಾಖಿ ಸಾವಂತ್ ಅವರು ನಟಿಸಿದ ಚಪ್ಪನ್ ಚೂರಿ ಚಿತ್ರದ ಹಾಡು ಬಿಡುಗಡೆ ಆಗಿದೆ. ಈ ಹಾಡು ಟಾಪ್ 6 ಟ್ರೆಂಡಿಂಗ್ ನಲ್ಲಿ ಇದೆ. ಆದರೆ ರಾಖಿ ಆ ಹಾಡನ್ನು ನಂಬರ್ 1ಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.

 

View this post on Instagram

 

Thanks ???? my fans thanks ???? to God thanks ???? Mediya 4trending my song #chappnachuri

A post shared by Rakhi Sawant (@rakhisawant2511) on

ವಿಡಿಯೋದಲ್ಲಿ ಹೇಳಿದ್ದೇನು?
ಅಭಿಮಾನಿಗಳೇ, ನೀವು ಎಂತಹ ಜನರು. ನೀವು ನನ್ನ ಎಂತಹ ಅಭಿಮಾನಿಗಳು? ನಾನು ಅನೇಕ ವರ್ಷಗಳಿಂದ ನಿಮಗೆ ಮನರಂಜನೆ ನೀಡುತ್ತಿದ್ದೇನೆ. ಈಗ ನೋಡಿ ನಾನು ನನ್ನ ಪತಿಯ ಬಳಿ ಶಾಶ್ವತವಾಗಿ ಯುಕೆಗೆ ಹೋಗುತ್ತಿದ್ದೇನೆ. ಈಗ ಚಿತ್ರರಂಗದಲ್ಲಿ ನೀವು ನನಗೆ ಒಂದು ಹಿಟ್ ಕೂಡ ನೀಡಬೇಡಿ?. ನಾನು 12-15 ವರ್ಷದಿಂದ ಚಿತ್ರರಂಗದಲ್ಲಿ ಇದ್ದೇನೆ. ನಾನು ನಿಮಗೆ ಸಾಕಷ್ಟು ಮನರಂಜನೆ ನೀಡಿದ್ದೇನೆ. ನಿಮಗೆ ಮನರಂಜನೆ ನೀಡಲು ಹೊಟ್ಟೆ ಹಸಿವಿನಲ್ಲಿ ಕೇವಲ ಸಲಾಡ್ ತಿಂದು ಇಷ್ಟು ಸುಂದರವಾಗಿದ್ದೇನೆ. ಜೊತೆಗೆ ಡ್ಯಾನ್ಸ್, ಕಾಮಿಡಿ ಮಾಡುವ ಮೂಲಕ ನಿಮಗೆ ಮನರಂಜನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

rakhi sawant

ಈಗ ನಾನು ನನ್ನ ಪತಿಯ ಬಳಿ ಹೋಗುತ್ತಿದ್ದೇನೆ. ನಾನು ಹೋಗುವಾಗ ನೀವು ನನಗೆ ಆಶೀರ್ವಾದ ನೀಡುವುದಿಲ್ಲವೇ. ಎಲ್ಲಾ ಚಾನೆಲ್‍ನಲ್ಲಿ ನನ್ನ ಹಾಡು ಪ್ಲೈ ಮಾಡಿಸಲು ನನ್ನ ಬಳಿ ಅಷ್ಟೊಂದು ಹಣ ಇಲ್ಲ ಹಾಗೂ ನಾನು ಅಂಬಾನಿ ಕೂಡ ಅಲ್ಲ. ಚಪ್ಪನ್ ಚೂರಿ ಹಾಡು ಈಗ 6ನೇ ನಂಬರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಅದನ್ನು ನಂಬರ್ 1 ಸ್ಥಾನದಲ್ಲಿ ಟ್ರೆಂಡ್ ಆಗುವ ರೀತಿ ಮಾಡುವುದು ಕೇವಲ ನಿಮ್ಮಿಂದ ಸಾಧ್ಯ. ಏಕೆಂದರೆ ನಾವು ಆ ಹಾಡನ್ನು ನಂಬರ್ 1ನಲ್ಲಿ ಟ್ರೆಂಡಿಂಗ್ ಮಾಡಲು ಆಗುವುದಿಲ್ಲ. ನೀವು ನನ್ನ ಅಭಿಮಾನಿಗಳು. ನೀವು ನನ್ನನ್ನು ಪ್ರೀತಿಸುವುದಿಲ್ಲವೇ?. ಬೇಗ ನನ್ನ ಹಾಡನ್ನು ಪ್ಲೈ ಮಾಡಿ ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಖಿ ಅವರ ಪತಿ ಯಾರೆಂಬುದು ಇದುವರೆಗೂ ತಿಳಿದು ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಖಿ, ನನ್ನ ಪತಿಗೆ ಮಧ್ಯಮಗಳ ಮುಂದೆ ಬರುವುದು ಇಷ್ಟವಿಲ್ಲ. ಅವರು ಒಬ್ಬ ಉದ್ಯಮಿ ಹಾಗೂ ತುಂಬಾ ಒಳ್ಳೆಯ ಮನುಷ್ಯ ಎಂದು ಹೇಳಿದ್ದರು.

 

View this post on Instagram

 

????????????????????????????????????????????????????????????????????????????????????????????????????????????????????????

A post shared by Rakhi Sawant (@rakhisawant2511) on

Share This Article
Leave a Comment

Leave a Reply

Your email address will not be published. Required fields are marked *