– ಕೋಲಾರದಲ್ಲಿ ಮುಂದುವರಿದ ಕಾಂಗ್ರೆಸ್ ಶಾಸಕರ ವಾಕ್ಸಮರ
ಕೋಲಾರ: ಕೋಲಾರದಲ್ಲಿ (Kolar) ಕಳೆದೊಂದು ವಾರದಿಂದ ಕಾಂಗ್ರೆಸ್ ಶಾಸಕರ ವಾಕ್ಸಮರ ಜೋರಾಗಿ ನಡೆಯುತ್ತಿದೆ. ಸ್ವಪಕ್ಷೀಯ ಕಾಂಗ್ರೆಸ್ ಶಾಸಕರು ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುವ ಮೂಲಕ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಲ್ಲವೆಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಭಾನುವಾರ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ (SN Naraynaswamy) ನಾನು ಬಿಪಿಎಲ್ ಕಾರ್ಡ್ ಎಂಎಲ್‌ಎ, ಮಾಲೂರು ಶಾಸಕ ಕೆ.ವೈ.ನಂಜೇಗೌಡ (KY Nanjegowda) ಎಪಿಎಲ್ ಶಾಸಕರೆಂದು ಆರೋಪಿಸಿದ್ದರು. ಅಲ್ಲದೇ ಅವರಿಗೆ ಉಸ್ತುವಾರಿ ಸಚಿವರು ಎರಡೂವರೆ ಸಾವಿರ ಕೋಟಿ ಅನುದಾನ ಕೊಟ್ಟಿದ್ರೆ ಅವರ ಸ್ವಾಮಿನಿಷ್ಠೆ ಇರಲಿ ಎಂದು ಶಾಸಕ ನಂಜೇಗೌಡಗೆ ಟಾಂಗ್ ನೀಡಿದ್ದರು. ಈ ಹಿನ್ನೆಲೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಇಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಟಾಂಗ್ ಕೊಟ್ಟಿದ್ದು, ಬಿಪಿಎಲ್ ಕಾರ್ಡ್ ಆಗಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಡಿಜೆಗೆ ಅನುಮತಿ ನಮ್ಮ ಹೋರಾಟಕ್ಕೆ ಸಿಕ್ಕ ಫಲ – ರಾಜಕೀಯ ಮುಖಂಡರಿಂದ ಸುಳ್ಳು ಪೋಸ್ಟ್
ಕೋಲಾರ ಜಿಲ್ಲೆ ಮಾಲೂರು ಹಾಲು ಒಕ್ಕೂಟದಲ್ಲಿ ಮಾತನಾಡಿದ ಅವರು, ನಾರಾಯಣಸ್ವಾಮಿ ಅವರು ದೊಡ್ಡ ಇನ್‌ಕಮ್ ಟಾಕ್ಸ್ ಹೋಲ್ಡರ್ ಆಗಿದ್ದಾರೆ. ಬಿಪಿಎಲ್ ಕಾರ್ಡ್‌ನವರೆಂದು ಇನ್ನೊಮ್ಮೆ ಮಾತನಾಡಬೇಡಿ. ಬಿಪಿಎಲ್ ಕಾರ್ಡ್ ಅಂತ ನೀವು ಡಿಕ್ಲೇರ್ ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ. ನಿಮ್ಮ ತಂದೆ ತಾಯಿ ಅವರು ಆಗ ಬಿಪಿಎಲ್ ಕಾರ್ಡ್ ಹೊಂದಿರಬಹುದು ಆದ್ರೆ ನೀನು ಬುದ್ಧಿವಂತ, ಎಪಿಎಲ್ ಆಗಿದ್ದೀಯಾ. ಈಗಲೂ ನೀನು ಬಿಪಿಎಲ್ ಕಾರ್ಡ್ ಎಂದು ಪ್ರೂವ್ ಮಾಡಿದರೆ ನಾನು ರಾಜಕೀಯದಲ್ಲಿ ಇರುವುದಿಲ್ಲ ಎಂದು ಸವಾಲಾಕಿದ್ದಾರೆ. ನಾನು ನಮ್ಮ ತಾತನವರ ಕಾಲದಿಂದ ಎಪಿಎಲ್ ಕಾರ್ಡ್ ಹೊಂದಿರುವೆ. ನಾವು ಏನು ಮಾಡುತ್ತೀವಿ, ಮಾತನಾಡುತ್ತಿದ್ದೇವೆ ಅಂತ ಜನರು ನೋಡುತ್ತಿದ್ದಾರೆ. ಮೂರು ಬಾರಿ ಶಾಸಕರಾಗಿದ್ದೀರಿ, ಯಾರ ಬಗ್ಗೆ ಮಾತನಾಡುತ್ತಿದ್ದೀರಿ ತಿಳಿದುಕೊಳ್ಳಿ ಎಂದರು. ಇದನ್ನೂ ಓದಿ: ಸರ್ಕಾರಿ ಕೆಲಸಗಳಿಗೆ ಇನ್ಮುಂದೆ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಹೆಲಿಕಾಪ್ಟರ್ ಸೇವೆ ಪಡೆಯಲು ನಿರ್ಧಾರ
ಇನ್ನು ಎಂಎಲ್‌ಸಿ ಅನಿಲ್ ಕುಮಾರ್ ಜಿಲ್ಲೆಯ ಕಾಂಗ್ರೆಸ್ ಶಾಸಕರನ್ನು ಕೆಡಿಸುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಅನಿಲ್ ಕುಮಾರ್ ಹೇಳಿದೆಲ್ಲ ಕೇಳುವುದಕ್ಕೆ ನಾನು ಮಗುವೆ? ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನಲ್ಲ, ಕೆಳ ಹಂತದಿಂದ ನಾನು ಬಂದಿರುವೆ. ಈ ಹಿಂದೆ ಅನಿಲ್ ಕುಮಾರ್ ಮತ್ತು ನಾರಾಯಣಸ್ವಾಮಿ ಎಷ್ಟು ಒಗ್ಗಟ್ಟು ಆಗಿದ್ದರು. ಅನಿಲ್ ಕುಮಾರ್ ಸಾಮಾನ್ಯ ವ್ಯಕ್ತಿ, ಒಳ್ಳೆತನ ಇಲ್ಲಿ ಇರುತ್ತೆ ಅಲ್ಲಿ ಇರುತ್ತಾರೆ ಎಂದು ಶಾಸಕ ನಾರಾಯಣಸ್ವಾಮಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ RSS vs RSS ನಡುವಿನ ಜಗಳ – ಪ್ರಿಯಾಂಕ್ ಖರ್ಗೆ