ನ್ಯಾಯಾಲಯದ ಆವರಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ ಸಹೋದರ ಡಿಕೆ ಸುರೇಶ್

Public TV
1 Min Read
DK SHIVAKUMAR DK SURESH copy

ನವದೆಹಲಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಇನ್ನೂ 9 ದಿನಗಳ ಕಾಲ ಇಡಿ ವಶದಲ್ಲಿಯೇ ಇರಲಿದ್ದು, ದೆಹಲಿಯ ಫ್ಲ್ಯಾಟ್‍ನಲ್ಲಿ ಪತ್ತೆಯಾದ 8.59 ಕೋಟಿ ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ನಿನ್ನೆ ರಾತ್ರಿ ಅರೆಸ್ಟ್ ಆಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ರನ್ನು ಸೆಪ್ಟೆಂಬರ್ 13ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ ದೆಹಲಿ ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶ ನೀಡುತ್ತಿದಂತೆ ಸಂಸದ ಡಿಕೆ ಸುರೇಶ್ ಅವರು ಕಣ್ಣೀರಿಟ್ಟ ದೃಶ್ಯಕಂಡು ಬಂತು.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಸುರೇಶ್ ಅವರು, ನಾನು ಒಬ್ಬ ಮನುಷ್ಯ ಎಂದರು. ಇದೇ ವೇಳೆ ಕಾರ್ಯಕರ್ತರು ಅಭಿಮಾನಿಗಳಿಗೆ ದೆಹಲಿಗೆ ಆಗಮಿಸದಂತೆ ಮನವಿ ಮಾಡಿದರು. ಡಿಕೆ ಶಿವಕುಮಾರ್ ಅವರು ಧೈರ್ಯದಿಂದ ಇರುವಂತೆ ಎಲ್ಲರಿಗೂ ಹೇಳಿದ್ದಾರೆ. ನ್ಯಾಯಾಲಯಕ್ಕೆ ಗೌರವ ನೀಡುವುದು ನಮ್ಮ ಕರ್ತವ್ಯ. ನಾವು ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಭಾವುಕರಾಗಿ ಹೇಳಿದರು.

DK SHIVAKUMAR DK SURESH

ನನಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದ್ದು, ಕಾನೂನು ತಿರುಚುವ ಕೆಲಸವನ್ನು ಬಿಜೆಪಿ ಮಾಡಿದೆ. ಕರ್ನಾಟದಲ್ಲಿ ಪ್ರಬಲ ನಾಯಕರನ್ನು ಮಣಿಸಲು ಈ ರೀತಿ ಮಾಡಿದೆ. ನಾವೆಲ್ಲರೂ ಕೂಡ ಡಿಕೆ ಶಿವಕುಮಾರ್ ಅವರ ಬೆಂಬಲಕ್ಕೆ ನಿಂತು ಅವರಿಗೆ ಸ್ಥೈರ್ಯ ತುಂಬುವ ಕೆಲಸ ಮಾಡೋಣ. ಸೆಪ್ಟೆಂಬರ್ 13ರಂದು ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಳ್ಳಲಿದೆ ಎಂದರು.

ಇದಕ್ಕೂ ಮುನ್ನ ಸರಿಸುಮಾರು ಒಂದೂಮುಕ್ಕಾಲು ಗಂಟೆ ನಡೆದ ಸುದೀರ್ಘ ವಾದ-ಪ್ರತಿವಾದದ ಆಲಿಸಿದ ಪಿಎಂಎಲ್‍ಎ ಕೋರ್ಟ್ ನ್ಯಾಯಧೀಶ ಅಜಯ್ ಕುಮಾರ್ ಕುಹುರ್, ಡಿಕೆಶಿಯನ್ನು ಇ.ಡಿ ವಶಕ್ಕೆ ಒಪ್ಪಿಸಿ ಆದೇಶ ನೀಡಿದರು. ಕೋರ್ಟ್ ಆದೇಶದ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರ ಮೊಗದಲ್ಲಿ ನಿರಾಸೆ ಆವರಿಸಿತು. ಅಣ್ಣನ ಸ್ಥಿತಿ ನೋಡಿ ಕೋರ್ಟ್ ಹಾಲ್‍ನಲ್ಲಿಯೇ ಸಂಸದ ಡಿಕೆ ಸುರೇಶ್ ಬಿಕ್ಕಿ ಬಿಕ್ಕಿ ಅತ್ತರು.

Share This Article
Leave a Comment

Leave a Reply

Your email address will not be published. Required fields are marked *